Ticker

6/recent/ticker-posts

Ad Code

ಅಪ್ರಾಪ್ತರ ವಾಹನ ಸವಾರಿ : ದ್ವಿಚಕ್ರ ಪೋಲಿಸ್ ವಶ, ಮಾಲೀಕರ ವಿರುದ್ಧ ಕೇಸು

 

ಬದಿಯಡ್ಕ : ಅಪ್ರಾಪ್ತರು ವಾಹನ ಚಲಾಯಿಸುವ ಮೂಲಕ ನಿಯಮ‌ ಉಲ್ಲಂಘನೆಯಾಗುತ್ತಿದ್ದು ಈ ಬಗ್ಗೆ  ಬದಿಯಡ್ಕ ಪೋಲಿಸರು ತಪಾಸಣೆ ಹಾಗೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.  13 ವರ್ಷದ ಮಗು ಸೇರಿದಂತೆ ಮಕ್ಕಳು ಸವಾರಿ ಮಾಡಿದ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಕ್ಕಳು ಚಲಾಯಿಸಿದ ವಾಹನದ ಆರ್‌ಸಿ ಮಾಲೀಕರಾದ ಮೂವರ ವಿರುದ್ಧ ಪೋಲಿಸರು ಕೇಸು ದಾಖಲಿಸಿದ್ದಾರೆ. ಎಡನೀರು  ಕನ್ನಡಿಪಾರದ ಎಂ.ಕೆ. ಹುಸೇನ್ (54), ಕುಂಬ್ಡಾಜೆ ಅಣ್ಣಡ್ಕದ ಅಬ್ದುಲ್ಲ (55) ಮತ್ತು ನೆಕ್ರಾಜೆಯ ಉದ್ದಂದೋಹ ಮಂಜಿಲ್‌ನ ಅಫ್ಸತ್ ಬೀವಿ (29) ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ 5.30ಕ್ಕೆ ಬದಿಯಡ್ಕ ಎಸ್‌ಐ. ರೂಪೇಶ್ ನೇತೃತ್ವದ ಪೊಲೀಸ್ ತಂಡ ನೆಲ್ಲಿಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದಾಗ 16 ವರ್ಷದ ಬಾಲಕ ಸವಾರಿ ಮಾಡಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡರು. ಆರ್‌ಸಿಯ ಮಾಲೀಕರಾಗಿರುವ ತನ್ನ ತಂದೆ ಎಂ.ಕೆ. ಹುಸೇನ್ ತನಗೆ ಬೈಕನ್ನು ಸವಾರಿ ಮಾಡಲು ನೀಡಿದ್ದಾಗಿ ಬಾಲಕ ಬಹಿರಂಗಪಡಿಸಿದ್ದಾನೆ ಇದರ ನಂತರ, ಪೊಲೀಸರು 16 ವರ್ಷದ ಬಾಲಕನನ್ನು ಬಿಡುಗಡೆ ಮಾಡಿ, ಬೈಕ್ ಅನ್ನು ವಶಕ್ಕೆ ಪಡೆದು ಹುಸೇನ್ ವಿರುದ್ಧ ಪ್ರಕರಣ ದಾಖಲಿಸಿದರು. ಕುಂಬ್ಡಾಜೆ ಪೊಡಿಪ್ಪಳ್ಳದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ 13 ವರ್ಷದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದರು. ಮಗು ನೀಡಿದ ಮಾಹಿತಿಯ ಆಧಾರದ ಮೇಲೆ, ಅಣ್ಣಡ್ಕದ ಅಬ್ದುಲ್ಲ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೀಜಂತ್ತಡ್ಕದಲ್ಲಿ ಎಸ್.ಐ. ಸುಕುಮಾರನ್ ನೇತೃತ್ವದ ಪೊಲೀಸ್ ತಂಡ ನಡೆಸಿದ ತಪಾಸಣೆಯ ಸಂದರ್ಭ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಯಿತು. 17 ವರ್ಷದ ಬಾಲಕ ತನ್ನ ಸ್ನೇಹಿತನ ಸಹೋದರಿ ಅಫ್ಸತ್ ಬೀವಿ (29) ತನಗೆ ಸ್ಕೂಟರ್ ಸವಾರಿ ಮಾಡಲು ನೀಡಿದ್ದಾಗಿ ಬಹಿರಂಗಪಡಿಸಿದ್ದಾನೆ. ಈ ಬಗ್ಗೆ ಅಫ್ಸತ್ ಬೀವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Post a Comment

0 Comments