Ticker

6/recent/ticker-posts

Ad Code

ನಾಯಿ ಕಚ್ಚಿದ ಆರು ತಿಂಗಳ ಬಳಿಕ ರೇಬೀಸ್ ನಿಂದ 9 ವರ್ಷದ ಬಾಲಕಿ ಮೃತ್ಯು

ಮುಂಬೈ : ನಾಯಿ ಕಚ್ಚಿ ಆರು ತಿಂಗಳ ನಂತರ, 9 ವರ್ಷದ ಬಾಲಕಿಯೋರ್ವೆ ರೇಬೀಸ್ ನಿಂದ ಸಾವನ್ನಪ್ಪಿದ್ದಾಳೆ.  ಮಹಾರಾಷ್ಟ್ರದ ಪಾಲ್ಘರ್‌ನ ಬಾಲಕಿ ಮುಂಬೈ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾಳೆ. ಮೃತಳನ್ನು ಕಾಶಿಶ್ ಸಹಾನಿ ಎಂದು ಗುರುತಿಸಲಾಗಿದೆ, ಅವಳು ನಾಲಾಸೋಪಾರ ಪಶ್ಚಿಮದ 'ಸುಬೋಧ್ ಸಾಗರ್' ಹೌಸಿಂಗ್ ಸೊಸೈಟಿ ನಿವಾಸಿಯಾಗಿದ್ದು, ಮದರ್ ಮೇರಿ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು.  ಕಾಶಿಶ್ ತನ್ನ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಆಕೆಯ ಕೈಗೆ ಕಚ್ಚಿ ಗಾಯವಾಗಿತ್ತು. ಮರುದಿನ ಆಕೆಯ ಕುಟುಂಬವು ಆಕೆಯನ್ನು ವೈದ್ಯಕೀಯ ಸಹಾಯಕ್ಕಾಗಿ ಕರೆದೊಯ್ದರೂ, ಮಗುವಿಗೆ ಇಂಜೆಕ್ಷನ್  ಭಯವಿದ್ದ ಕಾರಣ ಲಸಿಕೆಯನ್ನು ಹಾಕಿರಲಿಲ್ಲ. ಗಾಯ ಗುಣವಾಗಿದ್ದರಿಂದ  ಕುಟುಂಬವು ಅದನ್ನು ನಿರ್ಲಕ್ಷಿಸಿತ್ತು. ಕೆಲವು ದಿನಗಳ ಹಿಂದೆ  ಕಾಶಿಶ್ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆಕೆಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿತು.  ಆಹಾರ ಮತ್ತು ನೀರು ತೆಗೆದುಕೊಳ್ಳುವುದನ್ನು ನಿಲ್ಲಿಸಿದಳು ಮತ್ತು ಅವಳ  ಕಣ್ಣುಗಳು ವಿಶಿಷ್ಟವಾದ ಕೆಂಪು ಬಣ್ಣಕ್ಕೆ ತಿರುಗಿದವು.  ಕುಟುಂಬವು ತಕ್ಷಣ ಅವಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿತು. ನಂತರ, ವಿಶೇಷ ಚಿಕಿತ್ಸೆಗಾಗಿ ಮುಂಬೈನ ಕಸ್ತೂರ್ಬಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯಕೀಯ ತಂಡದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ವರದಿಯು ಅಧಿಕೃತವಾಗಿ ಸಾವಿಗೆ ಕಾರಣ ರೇಬೀಸ್ ಸೋಂಕು ಎಂದು ದೃಢಪಡಿಸಿದೆ. 

Post a Comment

0 Comments