Ticker

6/recent/ticker-posts

Ad Code

ಕೆ. ಸುರೇಂದ್ರನ್ ಮನೆ ಮನೆ ಭೇಟಿ : ಮತದಾರರಿಂದ ನೇರವಾಗಿ ಮತಯಾಚನೆ

ಮಂಜೇಶ್ವರ: ಚುನಾವಣೆ ಪ್ರಚಾರ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ಮಂಜೇಶ್ವರ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ನೇರವಾಗಿ ಮತದಾರರ ಮನೆಗಳಿಗೆ ಭೇಟಿಯಿತ್ತರು. ಕೆ. ಸುರೇಂದ್ರನ್ ಅವರು ಮೀಂಜ ಪಂಚಾಯತ್‌ನ ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು.

 ಕೋಳ್ಯೂರಿನ ಮತದಾರರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಮೀಂಜ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ಮತದಾರರನ್ನು ಭೇಟಿಯಾದರು.  ಕರಿಬೈಲು, ಬೇರಿಕೆ ಮತ್ತು ಅರಿಯಾಳಗಳಲ್ಲೂ ಪ್ರಚಾರ ಪರ್ಯಟನೆ ನಡೆಸಿದರು. ಮಠಂದೂರು ಮತ್ತು ಚಿಗುರುಪಾದೆಯಲ್ಲಿ ನಡೆದ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದರು.

Post a Comment

0 Comments