Ticker

6/recent/ticker-posts

Ad Code

ನೆಲ್ಲಿಕುಂಜೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

 

ಪೆರ್ಲ : ಅತೀ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ನೆಲ್ಲಿಕುಂಜೆಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ರವಿವಾರ ಉಜ್ವಲ  ಚಾಲನೆ ನೀಡಲಾಗಿದೆ. ಬೆಳಗ್ಗೆ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ ನಡೆದು ಬಳಿಕ ಪೆರ್ಲ ಸತ್ಯನಾರಾಯಣ ಮಂದಿರದಿಂದ ಹಸಿರುವಾಣಿ ಹೊರೆ ಕಾಣಿಕೆ ವೈಭವೋಪೇತವಾಗಿ ಸಾಗಿ ಬಂದಿತ್ತು.

ಸಂಜೆ ದೇಲಂಪಾಡಿಯ ಗಣೇಶ ತಂತ್ರಿಗಳವರಿಗೆ ಪೂರ್ಣಕುಂಭ ಸ್ವಾಗತ, ಬಳಿಕ ವಿವಿಧ ತಾಂತ್ರಿಕ ವೈದಿಕ ಕಾರ್ಯಕ್ರಮಗಳು ಜರಗಿದವು.  ಉದ್ಯಮಿ ದಾನಿ ಗೋಪಾಲಕೃಷ್ಣ ಪೈ ಬದಿಯಡ್ಕ ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನೃತ್ಯಾರ್ಪಣಂ ಕಾರ್ಯಕ್ರಮ‌ ಜನ ಮನ ರಂಜಿಸಿತು.

 

 ಸೋಮವಾರ (ಇಂದು) ಬೆಳಗ್ಗೆ ಗಣಪತಿ ಹವನ, ಪ್ರೋಕ್ತಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಅಂಕುರ ಪೂಜೆ ನಡೆಯಿತು. ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಶ್ರೀ ಶಾರದ ಭಜನಾ ಸಂಘ ಕಜಂಪಾಡಿ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಉಕ್ಕಿನಡ್ಕ, ಮಹಾವಿಷ್ಣು ಭಜನಾ ಸಂಘ ಕೆಡೆಂಜಿ, ಪರಂಜ್ಯೋತಿ ಭಜನಾ ಸಂಘ ಬೆದ್ರಂಪಳ್ಳ ಅವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ  ಮಹಾಪೂಜೆ ಜರಗಿತು.

 




ಪಡ್ರೆ ಮಲೆತ್ತಡ್ಕ ಮೂಲಸ್ಥಾನದಿಂದ ಹೊರೆ ಕಾಣಿಕೆ ಸಮರ್ಪಿಸಲ್ಪಟ್ಟಿತು.  ಕಾರಣಿಕ ಪ್ರಸಿದ್ಧವಾದ ವಿಷ್ಣುಮೂರ್ತಿ ದೇವರ ವಿಗ್ರಹ ಸುಮಾರು 800 ವರ್ಷಗಳಿಗಿಂತಲೂ ಪ್ರಾಚೀನವಾಗಿದ್ದು ಅಭಯಪ್ರದಾಯವಾದ ಮೂರ್ತಿ ಕಾರಣಿಕ ಪ್ರಸಿದ್ಧವಾಗಿ ಭಕ್ತರ ಸಂಕಷ್ಟಗಳಿಗೆ ಕ್ಷಿಪ್ರ ವರದಾಯಕವಾಗಿದೆ. 

ಈ ಹಿನ್ನಲೆಯಲ್ಲಿ ಭಕ್ತ ಜನ  ವಿವಿಧೆಡೆಗಳಿಂದ ಜನ ಹರಿದು ಬರುತ್ತಿದ್ದು ಗ್ರಾಮೀಣ ಪ್ರದೇಶವಾದರೂ ಪ್ರಕೃತಿ ರಮಣೀಯವಾದ ಕ್ಷೇತ್ರ ಪರಿಸರ ವಿವಿಧೆಡೆ ಮಹಾದ್ವಾರ, ಅಲಂಕಾರದಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿದೆ.


Post a Comment

0 Comments