Ticker

6/recent/ticker-posts

Ad Code

ಬೆದ್ರಂಪಳ್ಳ ನಡುಬೈಲು ಪ್ರದೇಶದಲ್ಲಿ ವ್ಯಾಪಕ ಹುಚ್ಚುನಾಯಿ ಕಾಟ : ಇಬ್ಬರಿಗೆ ಕಡಿತ

 

ಪೆರ್ಲ : ಎಣ್ಮಕಜೆ ಪಂಚಾಯತಿನ ಬೆದ್ರಂಪಳ್ಳ ಸಮೀಪದ ನಡುಬೈಲು ಪ್ರದೇಶದಲ್ಲಿ ಹುಚ್ಚುನಾಯಿ ಕಾಟ ವ್ಯಾಪಕಗೊಂಡಿದ್ದು ರವಿವಾರ ಇಬ್ಬರಿಗೆ ಕಚ್ಚಿರುವುದಾಗಿ ದೂರಲಾಗಿದೆ. ಇಲ್ಲಿನ‌ ಪುಟಾಣಿಗೆ ನಾಯಿ ಕಚ್ಚಿದ್ದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ಇದೇ ಪ್ರದೇಶದಲ್ಲಿ ಕೂಲಿ ಕಾರ್ಮಿಕರೋರ್ವರು ನಾಯಿಯ ಕಡಿತಕ್ಕೊಳಗಾಗಿರುವುದಾಗಿ ದೂರಲಾಗಿದೆ. ಈ‌ ಬಗ್ಗೆ ಸ್ಥಳೀಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು  ಹಲವು ಪ್ರದೇಶಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳು ಭೀತಿ ಸೃಷ್ಟಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.

Post a Comment

0 Comments