ಬದಿಯಡ್ಕ: ಗೋವಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನೀರ್ಚಾಲಿನ ಎಂಬಿಎ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೃತರನ್ನು ನೀರ್ಚಾಲು ಮಲ್ಲಡ್ಕದ ಪ್ರಜ್ವಲ್ ಕರ್ಮಾರ್ಕರ್ (24) ಎಂದು ಗುರುತಿಸಲಾಗಿದೆ. ಅವರು ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಎಂಬಿಎ ವಿದ್ಯಾರ್ಥಿಯಾಗಿದ್ದು ಸೋಮವಾರ ರಾತ್ರಿ ಸ್ಕೂಟರ್ ನಿಯಂತ್ರಣ ತಪ್ಪಿ ಗೋವಾ ಎಂ.ಪಿ.ಎಸ್.ಎ.ಯಲ್ಲಿ ಅಪಘಾತ ಸಂಭವಿಸಿದೆ ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ಅವರನ್ನು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದರು. ಮಲ್ಲಡ್ಕದ ವಿಶ್ವೇಶ್ವರ ಭಟ್ ಮತ್ತು ನೀರ್ಚಾಲು ಶಾಲೆಯ ಶಿಕ್ಷಕಿ ಅನ್ನಪೂರ್ಣೇಶ್ವರಿ ದಂಪತಿಯ ಪುತ್ರರಾಗಿದ್ದಾರೆ.ಗೋವಾದಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಕಾರ್ಕಳದಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

0 Comments