ಪೆರ್ಲ: ಪೆರ್ಲ ಪುತ್ತಿಗೆ ಸೀತಾಂಗೊಳಿ ರಸ್ತೆ, ಮಣಿಯಂಪಾರೆ ಸಮೀಪ ಬುಧವಾರ ಮಧ್ಯಾಹ್ನ ಬೆಂಕಿ ಆಕಸ್ಮಿಕ ಸಂಭವಿಸಿದೆ. ವಿದ್ಯುತ್ ತಂತಿಗಳು ಪರಸ್ಪರ ಸಂಪರ್ಕಿಸಿ ಬೆಂಕಿ ಅನಾಹುತ ಸಂಭವಿಸಿದ್ದಾಗಿ ಅಂದಾಜಿಸಲಾಗಿದೆ. ಶೇಣಿ ಮತ್ತು ಪದ್ಯಾಣ ನಡುವೆ ಮೇಲಿನ ಮಣಿಯಂಪಾರೆ ಮೊಬೈಲ್ ಟವರ್ ಸಮೀಪ ಸುಮಾರು ನೂರು ಮೀ. ವ್ಯಾಪ್ತಿಯಲ್ಲಿ ರಸ್ತೆ ಬದಿಯ ಗಿಡ ಮರಗಳು, ಕಾಡು ಹೊತ್ತಿ ಉರಿದಿದೆ. ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

0 Comments