Ticker

6/recent/ticker-posts

Ad Code

ಪೆರ್ಲ ಕೊಡೆಂಕಿಲ ಮೂಲದ ಪ್ರತಿಭೆ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

 

ಪೆರ್ಲ: ಫಸ್ಟ್ ಟೆಕ್ ಚ್ಯಾಲೆಂಜ್ ಸಂಸ್ಥೆಯು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಸಿದ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಪಡ್ರೆ ಕೊಡೆಂಕಿಲ ಮೂಲದ ಶೌರಿ ದ್ವಿತೀಯ ಬಹುಮಾನ ಗಳಿಸಿ ವಿಶ್ವ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.‌ ಅಮೆರಿಕದ ಹೂಸ್ಟನ್ ನಗರದಲ್ಲಿ ನಡೆಯುವ ಮುಂದಿನ ಹಂತದ ಸ್ಪರ್ಧೆಯಲ್ಲಿ 60 ದೇಶದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.

ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹುಟ್ಟಿ ಬೆಳೆದ ಶೌರಿ, ರವಿಶಂಕರ ಕೊಡೆಂಕಿಲ, ಶೈಲಿ ದಂಪತಿಗಳ ಪುತ್ರ. ಕೊಡೆಂಕಿಲ (ಬರೆಕರೆ) ವಾಸುದೇವ ಭಟ್, ಸುಗುಣ ದಂಪತಿ ಹಾಗೂ ಮಂಗಳೂರು ಅಶೋಕ ನಗರದ ಕೆ.ಚಂದ್ರಮೋಹನ್(ನಿವೃತ್ತ ಬಿಎಸ್ಎನ್ಎಲ್ ಎಂಜಿನಿಯರ್), ಅರುಣ ಪ್ರಭ ದಂಪತಿಗಳ ಮೊಮ್ಮಗನಾಗಿದ್ದಾನೆ.

Post a Comment

0 Comments