ಪೆರ್ಲ : ಮಗಳ ಮದುವೆ ಕಳೆದ ಮೂರನೇ ದಿನ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಕ್ಕಿನಡ್ಕದಲ್ಲಿ ನಡೆದಿದೆ. ಇಲ್ಲಿನ ಮಸೀದಿ ಸಮೀಪ ವಾಸಿಸುವ ಮೂಲತಃ ಪಜ್ಜಾನ ಸಮೀಪದ ಸರ್ವೆ ಸಾದಿಕ್ ಅಲಿಯಾಸ್ ಸಾದಿಕ್ (55) ಮೃತಪಟ್ಟ ವ್ಯಕ್ತಿ. ಈ ಹಿಂದೆ ಕೊಲ್ಲಿ ಉದ್ಯೋಗಿಯಾಗಿ ದುಡಿದು ತಾಯ್ನಾಡಿಗೆ ಮರಳಿದ್ದರು. ಇದೀಗ ಉತ್ತಮ ಕೃಷಿಕರಾಗಿದ್ದ ಇವರ ಪುತ್ರಿ ದಂತ ವೈದ್ಯೆಯಾದ ಶರಫುನ್ನೀಸಾ ಅವರ ವಿವಾಹ ಮೂರು ದಿನಗಳ ಹಿಂದೆ ಪನ್ನಿಪಾರ ನಿವಾಸಿಯಾದ ಸಾದಿಕ್ ಅವರ ಪುತ್ರ ಡಾ. ನಭನ್ ಅವರ ಜತೆ ಭಾನುವಾರ ನಡೆದಿತ್ತು. ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾದಿಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀಚ ಉಳಿಸಲಾಗಲಿಲ್ಲ.
ಮೃತರು ಸಕ್ರಿಯ ಸುನ್ನಿ ಕಾರ್ಯಕರ್ತರಾಗಿದ್ದು ಸ ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದರು.ಮೃತರು ಪತ್ನಿ ಸಫಿಯಾ ಮಕ್ಕಳಾದ ಸಾಜಿದಾ, ಸಿಬಿಲಿಯಾತ್, ಮುಸ್ತಫಾ ಹಾಗೂ ಸಹೋದರರಾದ ಮುಹಮ್ಮದ್ ಹಾಜಿ (ಬಾಪಲಿಪೋನಂ ಮಹಲ್ ಅಧ್ಯಕ್ಷರು), ಅಬ್ದುಲ್ಲಾ, ಅಬ್ದುಲ್ರಹ್ಮಾನ್, ಕುಂಞಹ್ಮಮ್ಮದ್, ಹಸೈನಾರ್, ಅಶ್ರಫ್, ಬೀಫಾತಿಮಾ, ರಬಿಯಾ, ಅಬ್ದುಲ್ ಅಜೀಜ್, ಅಬ್ದುಲ್ ಹಮೀದ್ ಎಂಬಿವರನ್ನಗಲಿದ್ದಾರೆ.

0 Comments