Ticker

6/recent/ticker-posts

Ad Code

ಕಾರು -ಬೈಕ್ ಡಿಕ್ಕಿ : ಯುವತಿ ಸಾವು

 

ಬದಿಯಡ್ಕ : ನೆಡುಂಬಶ್ಯೇರಿಯ ಅಂಗಮಾಲಿ ಅಥಣಿ ವಿಮಾನ ನಿಲ್ದಾಣದ ವಿಐಪಿ ರಸ್ತೆಯಲ್ಲಿ ಶಿಫ್ಟ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ ಮಧೂರು ಪಟ್ಲದ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ನೆಲ್ಲಿಕ್ಕಟ್ಟೆ ಚರ್ಲಡ್ಕದಲ್ಲಿರುವ ಬಾಡಿಗೆ ಕ್ವಾರ್ಟರ್ಸ್ ನಿವಾಸಿ ಇಶಾನಾ ಇಸ್ಮತ್ (20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಕಾಸರಗೋಡಿನ ಮುಟ್ಟತ್ತೋಡಿ ನಿವಾಸಿ ಸರ್ಫತ್ (27) ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರಿಬ್ಬರು ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ ಹೊಡೆದಿದೆ.

ನೆಡುಂಬಶ್ಯೇರಿಯ ನೀರಜಾ ಏವಿಯೇಷನ್ ಅಕಾಡೆಮಿಯ ಮುಂಭಾಗದ ವಿಮಾನ ನಿಲ್ದಾಣದ ವಿಐಪಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಶಿಫ್ಟ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಬೈಕ್‌ ಹಿಂಬದಿ ಸವಾರೆಯಾಗಿದ್ದ ಇಶಾನ ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಅಂಗಮಾಲಿಯ ಲಿಟಲ್ ಫ್ಲವರ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರು. ಇಶಾನಾ ಮಧೂರು ಪಟ್ಲದ ದಿ. ಅಬೂಬಕರ್ ಅವರ ಮಗಳಾಗಿದ್ದು, ತಂದೆಯ ಮರಣದ ನಂತರ, ಚರ್ಲಡ್ಕದಲ್ಲಿ ಬಾಡಿಗೆ ಮನೆಲ್ಲಿ ವಾಸಿಸುತ್ತಿದ್ದರು. ಅಂಗಮಾಲಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರು ತಾಯಿ ನಬೀಸಾ. ಸಹೋದರರಾದ ಇಜಾಜ್ (ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿ), ಇನಾಸ್ ಮತ್ತು ಇಮ್ತಿಯಾಸ್ (ವಿದ್ಯಾರ್ಥಿಗಳು) ರನ್ನು ಅಗಲಿದ್ದಾರೆ.

Post a Comment

0 Comments