Ticker

6/recent/ticker-posts

Ad Code

ಭಾವಿ ವರನ ಸಾವಿನಿಂದ ನೊಂದ ವಧು ನೇಣು ಬಿಗಿದುಕೊಂಡು ಆತ್ಮಹತ್ಯೆ

 

ಕುಂಬಳೆ : ವಿವಾಹಿತರಾಗಿ ಸುಂದರ ಬದುಕಿನ ಕನಸು ಕಟ್ಟಿಕೊಂಡಿದ್ದ ಯುವತಿಯೋರ್ವಳು ತನ್ನ ಭಾವಿ ವರ ಬೈಕ್ ಅಪಘಾತದಲ್ಲಿ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ  ನಂತರ ಮನ ನೊಂದು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆಯೊಂದು ಕುಂಬಳೆಯಲ್ಲಿ ನಡೆದಿದೆ. 

ಕುಂಬಳೆ ಸಮೀಪದ  ಕುಂಟಂಗೇರಡ್ಕದ ಬಿ. ಜಯಾನಂದ ಎಂಬವರ ಪುತ್ರಿ ಪ್ರಫುಲ್ಲಾ (26) ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ತಮಿಳುನಾಡು ನಿವಾಸಿಯಾದ ಬ್ಯಾಂಕ್ ಉದ್ಯೋಗಿ ಮಣಿ ಎಂಬಾತನೊಂದಿಗೆ ಪ್ರಫುಲ್ಲಳ  ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆದಿತ್ತು. ಇದೀಗ ಒಂದು ತಿಂಗಳ ಹಿಂದೆ ಬೈಕ್ ಅಪಘಾತದಲ್ಲಿ ಮಣಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಯ ನಡುವೆ ಮಣಿ ನಿಧನರಾದರು. ಆ ನಂತರ ಪ್ರಫುಲ್ಲಾ ಮಾನಸಿಕವಾಗಿ ನೊಂದಿದ್ದು ಮನೆಯವರು ಹೊರಗಡೆ ಹೋಗಿರುವ ಸಂದರ್ಭ ನೋಡಿ ಮನೆಯೊಳಗಿನ ಫ್ಯಾನ್ ಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆಗೈದಿದ್ದಾಳೆ.

ಆತ್ಮಹತ್ಯೆಯ ಬಗ್ಗೆ ಪ್ರಫುಲ್ಲಾ ಬರೆದಿಟ್ಟ ಪತ್ರ ಪತ್ತೆಯಾಗಿದ್ದು ತನ್ನ ವರ ಅಗಲಿರುವುದು ಸಹಿಸಲಾಗದೆ ಈ ನಿರ್ಧಾರ ತೆಗೆದುಕೊಂಡಿದ್ದು ಮಣಿಯನ್ನು ಅಂತ್ಯಕ್ರಿಯೆ ಮಾಡಿದ ಸ್ಥಳದಲ್ಲಿಯೇ ತನ್ನ ದೇಹವನ್ನು ಅಂತ್ಯಕ್ರಿಯೆ ಮಾಡಬೇಕೆಂದು ಆತ್ಮಹತ್ಯಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕುಂಬಳೆ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments