ನೀರ್ಚಾಲು:ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಂದಾಯ ಇಲಾಖೆಯ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಬೇಳ ದರ್ಬೆತ್ತಡ್ಕದ ರಘು (48) ಮೃತ ವ್ಯಕ್ತಿ . ಕ್ಷಯರೋಗ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನಾರೋಗ್ಯ ಉಲ್ಬಣಗೊಂಡು ರಕ್ತ ವಾಂತಿ ಮಾಡಿದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ . ಅವರು ದಿವಂಗತ ಅಂಗಾರ ಮತ್ತು ಕಲ್ಯಾಣಿ ದಂಪತಿಯ ಪುತ್ರ. ಪತ್ನಿ ಶೋಭಾ, ಸಹೋದರ ರಜನಿಕಾಂತ್, ಸಹೋದರಿಯರಾದ ಚಿಂತನಾ, ಚೇತನಾ ಮತ್ತು ಶಾಲಿನಿ ಎಂಬವರನ್ನು ಅಗಲಿದ್ದಾರೆ

0 Comments