Ticker

6/recent/ticker-posts

Ad Code

ಆಂಬ್ಯುಲೆನ್ಸ್ - ಕಾರು ಪರಸ್ಪರ ಡಿಕ್ಕಿ : ಐವರಿಗೆ ಗಾಯ

ಬದಿಯಡ್ಕ : ಆಂಬ್ಯುಲೆನ್ಸ್ ಮತ್ತು ಕಾರು ಪರಸ್ಪರ  ಡಿಕ್ಕಿಯಾಗಿ ಐವರು ಗಾಯಗೊಂಡಿದ್ದಾರೆ.  ಕರ್ನಾಟಕದ ಬಂಟ್ವಾಳ ಅಳಿಕೆ ವಳಬಯಲು ನಿವಾಸಿ ಅಭಯ ಕೃಷ್ಣ (25), ಪತ್ನಿ ಶ್ರೀದೇವಿ (20), ಸಂಬಂಧಿಕರಾದ ಕಾರಡ್ಕ  ನಿವಾಸಿ ಅದ್ವೈತ್ (24), ಪತ್ನಿ ಇಂದುಲೇಖಾ (20) ಮತ್ತು ಬಂಟ್ವಾಳದ ಅಮೃತ ಲಕ್ಷ್ಮಿ (23) ಗಾಯಗೊಂಡಿದ್ದಾರೆ. ಅವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಬದಿಯಡ್ಕ  ಬಳಿಯ ಕರಿಂಬಿಲದಲ್ಲಿ ಈ ಅಪಘಾತ ಸಂಭವಿಸಿದ್ದು, ಪೆರ್ಲದಿಂದ ಬದಿಯಡ್ಕ ಕಡೆಗೆ ಬರುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. 

ಡಿಕ್ಕಿಯ ಪರಿಣಾಮ ಆಂಬ್ಯುಲೆನ್ಸ್‌ನ ಸೈರನ್ ಬಲ್ಬ್ ಒಡೆದು ಎಸೆಯಲ್ಪಟ್ಟು, ಕಾರಿನ ಹಿಭಾಗದಲ್ಲಿದ್ದ ಆಟೋ ರಿಕ್ಷಾದ ಗಾಜು ಮುರಿದಿದೆ. ಆಂಬ್ಯುಲೆನ್ಸ್ ನ ಮುಂಭಾಗವೂ ಹಾನಿಗೊಳಗಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕ ಅಭಯ ಕೃಷ್ಣ ಅವರ ದೂರಿನ ಮೇರೆಗೆ ಬದಿಯಡ್ಕ  ಪೊಲೀಸರು ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments