ನೀಲೇಶ್ವರ : ಚುನಾವಣೆಯ ಗೆಲುವಿನ ಬಳಿಕ ನೀಲೇಶ್ವರದ ಓರ್ಚಾದಲ್ಲಿ ಸಿಪಿಎಂ-ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಓರ್ಚಾದ ಸಿಪಿಎಂ ಕಾರ್ಯಕರ್ತ ಎ.ಕೆ. ರಿಜೇಶ್ (39) ಮತ್ತು ಓರ್ಚಾದ ಮುಸ್ಲಿಂ ಲೀಗ್ ಕಾರ್ಯಕರ್ತ ಟಿ. ಮುಹಮ್ಮದ್ ಫಯಾಜ್ (16) ಸಂಘರ್ಷದಲ್ಲಿ ಗಾಯಗೊಂಡವರಾಗಿದ್ದಾರೆ.
ನೀಲೇಶ್ವರ ಪೊಲೀಸರು ಎರಡೂ ಕಡೆಯ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಓರ್ಚಾ ಶಿಹಾಬ್ ತಂಗಲ್ ಚಾರಿಟೇಬಲ್ ಟ್ರಸ್ಟ್ ಕಚೇರಿ ಬಳಿ ಎರಡೂ ಕಡೆಯವರು ಘರ್ಷಣೆ ನಡೆಸಿದ್ದಾರೆ. ಸಿಪಿಎಂ ಕಾರ್ಯಕರ್ತ ರಿಜೇಶ್ ಅವರ ದೂರಿನ ಮೇರೆಗೆ ಮುಹಮ್ಮದ್ ಫಯಾಜ್, ಫರ್ಹಾನ್, ಫುಹಾದ್ ಮತ್ತು ರಿಜ್ವಾನ್ ವಿರುದ್ಧ ಮತ್ತು ಮುಹಮ್ಮದ್ ಫಯಾಜ್ ಅವರ ದೂರಿನ ಮೇರೆಗೆ ಸಿಪಿಎಂ ಕಾರ್ಯಕರ್ತರಾದ ಸಜಯ್, ಸನೂಪ್, ರಾಜೇಶ್ ಮತ್ತು ಅಶ್ರಫ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

0 Comments