ಕಾಸರಗೋಡು : ಬೆಂಗಳೂರಿನ 'ರಂಗ ಶಂಕರ' ನಡೆಸುವ ಕನ್ನಡ ನಾಟಕೋತ್ಸವವು ಮೇ ತಿಂಗಳ 21ರಿಂದ ಮೇ 24 ರ ವರೆಗೆ ಕಾಸರಗೋಡು ಪಿಲಿಕುಂಜೆ ಟೌನ್ ಹಾಲ್ ನಲ್ಲಿ ಜರಗಲಿದೆ. ಪ್ರತೀ ದಿನ ಸಂಜೆ 7 ಗಂಟೆಯಿಂದ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಕನ್ನಡ, ಮಲಯಾಳಂ ಮತ್ತು ತುಳು ರಂಗ ಗೀತೆಗಳ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಜೂನಿಯರ್ (17 ವರ್ಷ ಕೆಳಗಿನವರು) ಮತ್ತು ಸೀನಿಯರ್ ವಿಭಾಗದಲ್ಲಿ ( 17 ವರ್ಷ ಮೇಲ್ಪಟ್ಟವರು) ಜರಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮೇ 15 ರ ಒಳಗೆ ಹೆಸರು ನೋಂದಾಯಿಸಿರಬೇಕು ಎಂದು ಸಂಘಟಕರು ತಿಳಿಸಿದ್ದಾರೆ.
ಇದರಂಗವಾಗಿ ಕರಂದಕ್ಕಾಡ್ ವಿಕಾಸ್ ಭವನದಲ್ಲಿ ಸಂಘಟನಾ ಸಭೆ ಜರಗಿತು. ಥಿಯೆಟ್ರಿಕ್ಸ್ ನ ಉಪಾಧ್ಯಕ್ಷರಾದ ವಲ್ಸನ್ ಮಾಸ್ತರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸವಾಕ್ ಜಿಲ್ಲಾ ಅಧ್ಯಕ್ಷರು ಹಾಗೂ ನಾಟಕೋತ್ಸವದ ಸಂಚಾಲಕರಾದ ಉಮೇಶ್ ಎಂ ಸಾಲ್ಯಾನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ಟಿ ವಿ ಗಂಗಾಧರ, ನಾರಾಯಣ ಶೆಟ್ಟಿ, ರಂಗ ನಿರ್ದೇಶಕ ಉದಯ್ ಸಾರಂಗ್, ಸಾಯಿ ಕೃಷ್ಣ, ರಂಗ ಕರ್ಮಿ ಅಶೋಕ್ ಕೊಡ್ಲಮೊಗರು, ದೇವಿಪ್ರಸಾದ್, ದಿವಾಕರ, ಕವಿ ಶ್ರೀನಿವಾಸ್ ಪೆರಿಕ್ಕಾನ, ಜಯಂತಿ ಸುವರ್ಣ, ಸ್ಕೂಲ್ ಆಫ್ ಡ್ರಾಮಾ ದ ಅನಂತ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಸವಾಕ್ ನ ಜಿಲ್ಲಾ ಕಾರ್ಯದರ್ಶಿ ಗಂಗಾಧರ ವಂದಿಸಿದರು.

0 Comments