Ticker

6/recent/ticker-posts

Ad Code

ಪಂದಳ ರಾಜಮನೆತನದ ಪ್ರತಿನಿಧಿಯಿಂದ ಮಲ್ಲಿಕಾರ್ಜುನ ಕ್ಷೇತ್ರ ಅರ್ಚಕ ದಿ. ರಾಧಾಕೃಷ್ಣ ಅಡಿಗರಿಗೆ ಸಂತಾಪ

 

ಕಾಸರಗೋಡು : ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 5 ದಶಕಗಳಿಗೂ ಅಧಿಕ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನದಲ್ಲಿದ್ದು ಇತ್ತೀಚೆಗೆ ನಿಧನರಾದ ಶ್ರೀ ರಾಧಾಕೃಷ್ಣ ಅಡಿಗರ ವೈಕುಂಠ ಸಮಾರಾಧನೆಗೆ ಪಂದಳ ರಾಜಮನೆತನದ   ಶ್ರೀ ನಾರಾಯಣ ರಾಜವರ್ಮಾ ಅವರು ಆಗಮಿಸಿ ಮನೆಯವರಿಗೆ ಸಾಂತ್ವನ ಹೇಳಿ ನುಡಿನಮನ ನೀಡಿದರು. 

ಕಾಸರಗೋಡಿನ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಕಾರ್ಯಾಧ್ಯಕ್ಷ   ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಶಾಲು ಹೊದಿಸಿ ಸ್ವಾಗತಿಸಿದರು. ಜೊತೆಯಲ್ಲಿ ಶಂಕರ ನಾರಾಯಣ ಅಡಿಗ. ನಾರಾಯಣ ಗುರು ಸ್ವಾಮಿ ಉದಯಗಿರಿ,  ಕೆ.ಕೆ.ಮಯ್ಯ ನೀರ್ಚಾಲು ಮೊದಲಾದವರಿದ್ದರು.

Post a Comment

0 Comments