ಬದಿಯಡ್ಕ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಮಿಕರೋರ್ವರು ನಿಧನರಾದರು. ಕುಂಟಿಕಾನ ಉರ್ಲಿತ್ತಡ್ಕದ ರಾಮ(56) ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು.
ಅವರು ದಿ. ಸುಂದರ ಮತ್ತು ದೇವಕಿ ದಂಪತಿಯ ಪುತ್ರರಾಗಿದ್ದು, ಪತ್ನಿ ಗೀತಾ, ಮಕ್ಕಳಾದ ಚಂದ್ರಶೇಖರ, ವನಜಕುಮಾರಿ, ಸುರೇಶ್ ಕುಮಾರ್, ಅಳಿಯಂದಿರು ಗಂಗಾಧರ, ಸುಬ್ರಹ್ಮಣ್ಯ, ಸೀತಮೋಳ್. ಸಹೋದರ ಸಹೋದರಿಯರಾದ ಸುಕುಮಾರ, ವೇಣುಗೋಪಾಲ, ಜಾನಕಿ, ಶಾಂತಿ, ಶೋಭಾ ಎಂಬಿವರನ್ನಗಲಿದ್ದಾರೆ.

0 Comments