ಬೆಳ್ಳೂರು : ನೆಟ್ಟಣಿಗೆ ಸಮೀಪದ ನಾಕೂರು ಬನ ಶ್ರೀ ವನಶಾಸ್ತಾರ ಮತ್ತು ರಕೇಶ್ವರಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಶ್ರೀ ಪೊಟ್ಟನ್ ದೈವದ ಪ್ರತಿಷ್ಠೆ ಮತ್ತು ಶ್ರೀ ರಕೇಶ್ವರಿ ದೈವದ ನೃತ್ಯೋತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ಮೇ 9ರಿಂದ ಮೇ 11ರವರೆಗೆ ನಡೆಯಲಿದೆ.
ಮೇ 9ರಂದು ಸಂಜೆ 5.30ರಿಂದ ಸುದರ್ಶನ ಹವನ, 10ರಂದು ಬೆಳಗ್ಗೆ 8ರಿಂದ ಗಣಪತಿ ಹೋಮ, 9.43ಕ್ಕೆ ಪೊಟ್ಟನ್ ದೈವದ ಸಾನಿಧ್ಯ ಪ್ರತಿಷ್ಠೆ, ಶ್ರೀ ವನಶಾಸ್ತಾರನಿಗೆ ಬಲಿವಾಡು ಕೂಟ ಮತ್ತು ಶ್ರೀ ರಕ್ತೇಶ್ವರಿ ಪರಿವಾರ ಶಕ್ತಿಗಳಿಗೆ ಚೈತನ್ಯ ಕಲಶ ದ್ವಾದಶ ಮೂರ್ತಿ ಆರಾಧನೆ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ಕುಳತರವಾಡು ಮನೆಯ ದೈವಸ್ಥಾನದಿಂದ ಶ್ರೀ ರಕೇಶ್ವರಿ ದೈವದ ಭಂಡಾರ ನಾಕೂರು ಬನಕ್ಕೆ ಆಗಮಿಸುವುದು, ರಾತ್ರಿ 7.30ಕ್ಕೆ ಶ್ರೀ ದೈವದ ತೊಡಂಙಲ್, ರಾತ್ರಿ 8ರಿಂದ ಭಜನೆ 8.30ರಿಂದ ಅನ್ನಸಂತರ್ಪಣೆ, 10ರಿಂದ ಪೊಟ್ಟನ್ ದೈವದ ಕೋಲ, 11ರಂದು ಬೆಳಗ್ಗೆ 9.30ರಿಂದ ಶ್ರೀ ರಕ್ತೇಶ್ವರಿ ದೈವದ ಕೋಲ, ದೈವದ ಅರಶಿನ ಪ್ರಸಾದ ಸ್ವೀಕಾರ, ಮಧ್ಯಾಹ್ನ 12ರಿಂದ ಶ್ರೀ ಗುಳಿಗನ ಕೋಲ, ಮಧ್ಯಾಹ್ನ 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

0 Comments