Ticker

6/recent/ticker-posts

Ad Code

ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ವಾಚನಾ ಕಳರಿಯಲ್ಲಿ ಹರಿತಕರ್ಮ ಸೇನೆಯೊಂದಿಗೆ ನೇರ ಸಂವಾದ

 

ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯದ ವಾಚನಾ ಕಳರಿ ಕಾರ್ಯಕ್ರಮದಂಗವಾಗಿ ಹರಿತ ಕರ್ಮಸೇನೆಯೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಎಣ್ಮಕಜೆ  ಹರಿತ ಕರ್ಮಸೇನಾ ಕಾರ್ಯದರ್ಶಿ ಉದಯಕುಮಾರಿ ಸರವು ಮಕ್ಕಳ ಜೊತೆ ಸಂವಾದದಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯ ವಿವಿಧ ಹಂತಗಳನ್ನು ತಿಳಿಸಿದರು. ಪ್ಲಾಸ್ಟಿಕ್ ತ್ಯಾಜ್ಯದಿಂದ ಉತ್ಪಾದನೆಯಾಗುವ ಸಾಮಾಗ್ರಿಗಳನ್ನು ಹಾಗೂ ಪ್ಲಾಸ್ಟಿಕ್ ನಿಂದ ಉಂಟಾಗುವ ವಿಷಾನಿಲ ಮಾರಕವಾಗುವ ರೋಗಗಳ ಬಗ್ಗೆ ತಿಳಿಸಿದರು.

 ಗ್ರಂಥಾಲಯದ ಬಾಲವೇದಿಕೆ ಮಕ್ಕಳು ಅವರೊಂದಿಗೆ ವಿವಿಧ ಮೌಲ್ಯಯುತ ಪ್ರಶ್ನಾವಳಿಗಳ ಮೂಲಕ ಅರಿವನ್ನು ಪಡೆದರು. 'ನಮ್ಮ ಪರಿಸರವನ್ನು ಕಾಪಾಡುವ ಹರಿತ ಕರ್ಮಸೇನಾ ಕಾರ್ಯಕರ್ತರನ್ನು ಪ್ಲಾಸ್ಟಿಕ್ ನವರು ಕಸದವರು ಎಂದು ಸಂಬೋಧಿಸುವುದನ್ನು ಬಿಟ್ಟು ಅವರನ್ನು ಗೌರವದಿಂದ ಕಾಣಬೇಕು. ಪ್ಲಾಸ್ಟಿಕ್ ನವರು ಕಸದವರು ಅವರಲ್ಲ ನಾವು. ಆದ್ದರಿಂದ ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡೋಣ. ನಾಳೆಯ ಪರಿಸರವನ್ನು ಉಳಿಸೋಣ' ಎಂದು ಬಾಲವೇದಿಕೆಯ ತೃಪ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ವಿಭಿನ್ನ ಕಾರ್ಯಕ್ರಮವನ್ನು ಮಕ್ಕಳ ಹೆತ್ತವರು ಪ್ರಶಂಸಿದರು. ಗ್ರಂಥಾಲಯ ಕಾರ್ಯದರ್ಶಿ ಉದಯ ಸಾರಂಗ ಕಾರ್ಯಕ್ರಮ ಸಂಯೋಜಿಸಿದರು.

Post a Comment

0 Comments