ಕುಂಬ್ಡಾಜೆ: ಬ್ಯಾಂಕ್ ಕಾವಲುಗಾರನಾದ ಯುವಕನನ್ನು ಇಬ್ಬರ ತಂಡ ಇರಿದು ಕೊಲೆಗೈದ ದಾರುಣ ಘಟನೆ ಕುಂಬ್ಡಾಜೆ ಮಾರ್ಪನಡ್ಕದಲ್ಲಿ ನಿನ್ನೆ (ಆದಿತ್ಯವಾರ) ರಾತ್ರಿ ನಡೆದಿದೆ. ಮಾರ್ಪನಡ್ಕ ಬಳಿಯ ಬೆದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ(45) ಕೊಲೆಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 8.30 ಗಂಟೆಯ ವೇಳೆ ಮಾರ್ಪನಡ್ಕದಲ್ಲಿ ಕಿರಣ್, ಅಖಿಲೇಶ್ ಎಂಬಿವರು ಸೇರಿ ಮಾರಕಾಯುಧಗಳಿಂದ ಸುರೇಶ್ ನನ್ನು ಇರಿದಿದ್ದಾರೆ. ಗಂಭೀರ ಗಾಯಗೊಂಡ ಸುರೇಶ್ ನನ್ನು ಸ್ಥಳೀಯರು ಸೇರಿ ಚೆಂಗಳ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಆಸ್ಪತ್ರೆಯಲ್ಲಿ ಸುರೇಶನಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡುವ ಸಿದ್ದತೆ ನಡೆಯುತ್ತಿದ್ದಂತೆಯೇ ಕೊನೆಯುಸಿರೆಳೆದನು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೀಡಾದ ಸುರೇಶ್ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಮಾರ್ಪನಡ್ಕ ಶಾಖೆಯಲ್ಲಿ ಕಾವಲುಗಾರನಾಗಿದ್ದರು. ಯಾವ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬ ನಿಖರ ಕಾರಣ ತಿಳಿದು ಬಂದಿಲ್ಲ. ವೈಯುಕಕ ದ್ವೇಷದಿಂದ ಇಬ್ಬರು ಬಂದು ಅತಿಕ್ರಮಣ ನಡೆಸಿರಬಹುದೆಂದು ಪೋಲಿಸರು ತಿಳಿಸಿದ್ದಾರೆ.

0 Comments