Ticker

6/recent/ticker-posts

Ad Code

ದೇವಸ್ಥಾನದ ಆವರಣ ಗೋಡೆ ಕುಸಿದು 6 ಮಂದಿ ಸಾವು

 

ಪುಣೆ : ದೇವಸ್ಥಾನದ ಆವರಣ ಗೋಡೆ ಕುಸಿದು ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಸಾಂಗ್ಲಿ  ಜಿಲ್ಲೆಯ ಜತ್  ತಾಲೂಕಿನ ಮೋಠೆವಾಡಿ ಗ್ರಾಮದಲ್ಲಿ ನಡೆದಿದೆ. ಮೋಠೆವಾಡಿ  ಮಹಾರಾಷ್ಟ್ರ- ಕರ್ನಾಟಕ ಗಡಿಯ ಹಳ್ಳಿಯಾಗಿದ್ದು, ಗ್ರಾಮದ ಮುರಗಾಬಾಯಿ ದೇವಸ್ಥಾನದಲ್ಲಿ  ಮಂಗಳವಾರ ಸಂಜೆ 5 ಗಂಟೆಯ ಸುಮಾರಿಗೆ  ಘಟನೆ ನಡೆದಿದೆ. ಘಟನೆಯಲ್ಲಿ 15 ಜನರಿಗೆ ಗಂಭೀರ ಗಾಯಗಳಾಗಿದೆ. ಗೋಡೆಯ ಕೆಳಗೆ ಇನ್ನೂ ಹಲವರು ಸಿಲುಕಿರಬಹುದೆಂದು ಅಂದಾಜಿಸಲಾಗಿದೆ.

ಗಾಯಗೊಂಡವರಿಗೆ ಜತ್ ನ  ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜತ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments