ಪೆರ್ಲ: ವಾಣಿನಗರ ಬೈಲಮೂಲೆ ನಿವಾಸಿ, ಟ್ಯಾಪಿಂಗ್ ಕಾರ್ಮಿಕ ಬಾಲಕೃಷ್ಣ ನಾಯ್ಕ (40)ರ ಮೃತದೇಹ ಪೈವಳಿಕೆಯ ಬೋಳಂಗಳದಲ್ಲಿರುವ ಸಹೋದರಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೈಲಮೂಲೆ ದಿ.ನಾರಾಯಣ ನಾಯ್ಕ ಮತ್ತು ಜಾನಕಿ ಅವರ ಪುತ್ರ ಬಾಲಕೃಷ್ಣ ನಾಯ್ಕ ಸೋಮವಾರ ಬೆಳಗ್ಗೆ ಪೈವಳಿಕೆಯ ಬೋಳಂಗಳದಲ್ಲಿರುವ ಸಹೋದರಿ ಸುನಿತಾರ ಮನೆಗೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಮನೆ ಬಳಿಯ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದರು. ಸಂಜೆ 3ರ ವೇಳೆ ಮನೆಯವರು ನೋಡಿದಾಗ ಶೆಡ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಬಾಲಕೃಷ್ಣ ಪತ್ತೆಯಾಗಿದ್ದಾರೆ.
ಮನೆಯವರು ಅವರನ್ನು ಪೈವಳಿಕೆ ಹಾಗೂ ಬಳಿಕ ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿಸಿದ್ದರೂ ಆ ವೇಳೆ ಮೃತಪಟ್ಟಿದ್ದರು. ಎರಡು ವರ್ಷ ಹಿಂದೆ ವಾಣೀನಗರದಲ್ಲಿ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ಬಾಲಕೃಷ್ಣ ಬ್ಯಾಂಕ್ ಸಾಲ ಮಾಡಿದ್ದರು. ಅವಿವಾಹಿತರಾಗಿದ್ದ ಅವರು ಅರ್ಥಿಕ, ಮಾನಸಿಕ ಸಮಸ್ಯೆಯಿತ್ತು ಎಂದು ಹೇಳಲಾಗುತ್ತಿದೆ. ಅವರು ತಾಯಿ, ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

0 Comments