ಕಾಸರಗೋಡು : ಇಲ್ಲಿನ ಕಸಬಾ ಬೀಚ್‌ನಲ್ಲಿರುವ ಮೀನಾಕ್ಷಿ ಎಂಬವರ  ಮನೆ ಮಂಗಳವಾರ ರಾತ್ರಿ ಸುರಿದ ಭಾರೀ ಗುಡುಗು ಸಹಿತ ಮಳೆಗೆ ಭಾಗಶಃ ಸುಟ್ಟು ಭಸ್ಮವಾಗಿದೆ. ಸಿಡಿಲು  ಫ್ರಿಡ್ಜ್‌ಗೆ ತಗುಲಿ, ಬೆಂಕಿ ಹತ್ತಿರದ ಟಿವಿ, ಫ್ಯಾನ್, ಹಾಸಿಗೆ ಮತ್ತು ಬಟ್ಟೆಗಳಿಗೆ ಹರಡಿತು. ಬೆಂಕಿ ಕಂಡ ತಕ್ಷಣ ಮನೆಯವರು ಹೊರಗೆ ಓಡಿದ್ದು  ಯಾವುದೇ ಸುಟ್ಟ ಗಾಯಗಳಿಲ್ಲದೆ ಪಾರಾಗಿದ್ದಾರೆ.

 ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಸನ್ನಿ ಇಮ್ಯಾನುಯೆಲ್ ನೇತೃತ್ವದ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದೆ. ಸುಮಾರು 2.5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.