Ticker

6/recent/ticker-posts

Ad Code

113 ಪ್ಯಾಕೇಟು ನಿಷೇಧಿತ ತಂಬಾಕು ಉತ್ಪನ್ನಗಳೊಂದಿಗೆ ಯುವಕನ ಬಂಧನ

 

ಬದಿಯಡ್ಕ : ಮಾರಾಟಕ್ಕೆ ಇಡಲಾಗಿದ್ದ 113 ಪ್ಯಾಕೇಟು  ಸರ್ಕಾರಿ ನಿಷೇಧಿತ  ತಂಬಾಕು ಉತ್ಪನ್ನಗಳೊಂದಿಗೆ ಯುವಕನೋರ್ವನನ್ನು  ಬಂಧಿಸಲಾಗಿದೆ. ನೆಲ್ಲಿಕಟ್ಟೆಯ ಬಿಲಾಲ್ ನಗರದ ಅನೀಸ್ (40) ಎಂಬಾತನನ್ನು ಬದಿಯಡ್ಕ  ಪೊಲೀಸರು ಬಂಧಿಸಿದ್ದಾರೆ.

 ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ, ನೆಲ್ಲಿಕಟ್ಟೆ ಬಸ್ ವೇಟಿಂಗ್ ಶೆಡ್ ಬಳಿ ಪ್ಲಾಸ್ಟಿಕ್ ಚೀಲದೊಂದಿಗೆ ಯುವಕನೋರ್ವ  ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಯುವಕನನ್ನು ತಡೆದು ನಿಲ್ಲಿಸಿದಾಗ ಅವನು ಹೊತ್ತೊಯ್ಯುತ್ತಿದ್ದ ಚೀಲದಲ್ಲಿ ತಂಬಾಕು ಉತ್ಪನ್ನಗಳು ಕಂಡುಬಂದಿವೆ. ನಂತರ, ಕೇರಳ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments