ತ್ರಿಭಾಷಾ ಮಾಧ್ಯಮದ ಶಾಲೆಯಲ್ಲಿ 12 ಮಂದಿಗೆ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಗ್ರೇಡ್
ಪೆರ್ಲ : 2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಣಿ ಶ್ರೀ ಶಾರದಾ ಹೈಯರ್ ಸೆಕೆಂಡರಿ ಶಾಲೆಗೆ ನೂರು ಶೇ. ಫಲಿತಾಂಶ ದಾಖಲಿಸುವ ಮೂಲಕ ಇದೀಗ ಸತತ 6ನೇ ವರ್ಷ ಈ ಸಾಧನೆಗೆ ಪಾತ್ರವಾಗಿದೆ. ಈ ಬಾರಿ ಒಟ್ಟು 260 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ. ಹನ್ನೆರಡು ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಲಭಿಸಿದೆ.
ಎಂಟು ವಿದ್ಯಾರ್ಥಿಗಳಿಗೆ ಒಂಬತ್ತು ವಿಷಯಗಳಲ್ಲಿ ಎಪ್ಲಸ್ ದಿಶಾಂತ್ ಪಟೇಲ್ ಬಿ,ಪ್ರಸೀದಾ ಎ.ಕೆ.ನಾಯಕ್, ಆಶೀತಾ,ಮನೀಷಾ ಕ್ರಾಸ್ತಾ, ಸ್ಪೂರ್ತಿ ಪಿ.ರೈ,ತೃಪ್ತಿ ಎನ್,ಇಝತ್ ಫಾತಿಮ ಕೆ,ಸೈಮಾ ಬಿ.ಎ,ಮರಿಯಂ ಸುಲ್ಫಾ,ಆಯಿಷಾ ಸೌಫ,ಖದೀಜತ್ ಫಝನಾ,ಆಯಿಷಾ ತಮನ್ನ ಪೂರ್ತಿ ಎಪ್ಲಸ್ ಗಳಿಸಿದವರು. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರಿ, ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

0 Comments