Ticker

6/recent/ticker-posts

Ad Code

ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಂಚಾಲಕರಾಗಿ ಗಿರಿ ವೀರನಗರ ಆಯ್ಕೆ


ಕಾಸರಗೋಡು : ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಂಚಾಲಕರಾಗಿ ಗಿರಿ ವೀರನಗರ ಆಯ್ಕೆಯಾದರು. ಇಂದು ಕಾಂಞಂಗಾಡಿನ  ಮಾವುಂಗಲ್ ವ್ಯಾಪಾರ ಭವನದಲ್ಲಿ ನಡೆದ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮ್ಮೇಳನದಲ್ಲಿ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯ ಪ್ರ.ಕಾರ್ಯದರ್ಶಿ ಕೆ.ಕೆ.ಹರಿದಾಸ್ ಸಮ್ಮೇಳನ ಉದ್ಘಾಟಿಸಿದರು. ಹಿಂದೂ ಐಕ್ಯವೇದಿಯ ರಾಜ್ಯ ರಕ್ಷಾಧಿಕಾರಿ ವಲ್ಸನ್ ತಿಲ್ಲಂಗೇರಿ, ಜಿಲ್ಲಾಧ್ಯಕ್ಷ ಕೆ.ಪಿ.ಶಾಜಿ, ಜಿಲ್ಲಾ ಪ್ರ.ಕಾರ್ಯದರ್ಶಿ ರಾಜನ್ ಮುಳಿಯಾರ್ ಮೊದಲಾದವರು ಮಾತನಾಡಿದರು. ಅಚ್ಚಗನ್ನಡದ ನಾಡದ ಗಡಿನಾಡು ಮಂಜೇಶ್ವರದಲ್ಲಿ ಸಕ್ರಿಯ ಸಂಘಟನಾತ್ಮ‌ಚಟುವಟಿಕೆ ನಿರತರಾಗಿದ್ದ ಗಿರಿ ವೀರನಗರ್ ಅನ್ಯಮತೀಯರ ದೌರ್ಜನ್ಯ ಹಾಗೂ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರವನ್ನು ಹಿಮ್ಮೆಟ್ಟಿಸುವಲ್ಲಿ ಕಳೆದ ಬಾರಿ ತೀವ್ರ ಚಟುವಟಿಕೆ ನಿರತರಾಗಿದ್ದ ಇವರು ಸಾಮಾಜಿಕ ಹಾಗೂ ಧಾರ್ಮಿಕವಾದ ಹಲವಾರು ಸಂಘಗಳಲ್ಲಿಯೂ ಸಕ್ರಿಯಾಗಿದ್ದಾರೆ. ತನ್ನ ಶಾಲಾ ಕಾಲೇಜು ಜೀವನದಿಂದಲೇ ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಯುವಮೋರ್ಚ ಮಂಡಲ ಅಧ್ಯಕ್ಷ, ಬಿಜೆಪಿ ಮಂಡಲ ಉಪಾಧ್ಯಕ್ಷ, ಬಾಲಗೋಕುಲ ಸಮಿತಿ ಅಧ್ಯಕ್ಷ ಹೀಗೆ ಹಲವು ಸಮಿತಿಗಳಲ್ಲಿ ಗುರುತಿಸಿಕೊಂಡಿದ್ದರು. ಹಿಂದೂ ಐಕ್ಯವೇದಿ  ತಾಲೂಕು ಸಂಚಾಲಕರಾಗಿ ಆಯ್ಕೆ ಗಿರಿ ವೀರನಗರ್ ಅವರನ್ನು ನಾಡಿನ ಪ್ರಮುಖರು ಅಭಿನಂದಿಸಿದ್ದಾರೆ
.

Post a Comment

0 Comments