ಬದಿಯಡ್ಕ : ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಮಾರ್ಪನಡ್ಕ ಶಾಖೆಯಲ್ಲಿ ಕಾವಲುಗಾರನಾಗಿದ್ದ ಬೆದ್ರುಕೂಡ್ಲು ನಿವಾಸಿ ಸುರೇಶ್ ಬಿ.ಕೆ(45)ಯನ್ನು ಕೊಂದ ಆರೋಪಿಗಳನ್ನು ಬದಿಯಡ್ಕ ಪೋಲಿಸರು ಬಂಧಿಸಿದ್ದಾರೆ. ಕುಂಬ್ಡಾಜೆಯ ಮಾಪಿಳ್ಳತ್ತೊಟ್ಟಿ ಬಾಲಕೃಷ್ಣ ಎಂಬವರ ಪುತ್ರ ಕಿರಣ್ (30) ಹಾಗೂ ಕರುವಲತ್ತಡ್ಕದ ಪಾಲೆಕ್ಕಾರ್ ಸುಬ್ಬ ನಾಯ್ಕ ಎಂಬವರ ಪುತ್ರ ಅಖಿಲೇಷ್ (25) ಎಂಬವರಾಗಿದ್ದಾರೆ ಬಂಧಿತ ಆರೋಪಿಗಳು. ನಿನ್ನೆ ರಾತ್ರಿ 8.30 ಗಂಟೆಗೆ ಇಬ್ಬರು ಆರೋಪಿಗಳು ಎರಡು ಬೈಕಲ್ಲಾಗಿ ಆಗಮಿಸಿ ಕೊಲೆ ನಡೆಸಿದ್ದು. ಬಳಿಕ ಒಂದು ಬೈಕನ್ನು ಕೊಲೆ ನಡೆದಲ್ಲಿಯೇ ಉಪೇಕ್ಷಿಸಿ ಇಬ್ಬರು ಒಂದಾಗಿ ಏತಡ್ಕ ಮೂಲಕ ನೆರೆಯ ಕರ್ನಾಟಕದ ಪುತ್ತೂರಿಗೆ ತಲುಪಿ ತಲೆಮರೆಸಲೆತ್ನಿಸಿದ್ದರು. ಈ ನಡುವೆ ಪೋಲಿಸರು ಬಂಧಿಸುವಲ್ಲಿ ಯಶಸ್ಬಿಯಾಗಿದ್ದರು. ಕಾಸರಗೋಡು ಎಎಸ್ ಪಿ ಅಚ್ಚುತ ಆಶೋಕ್, ಬದಿಯಡ್ಕ ಸಿಐ ಅನೂಪ್ ಕೃಷ್ಣ, ಎಸ್ ಐ ರೂಪೇಶ್,ಎಸ್ ಐ ಸುಕುಮಾರನ್, ಎಸ್ ಐ ಪ್ರಸಾದ್, ಎಸ್ ಐ ಸಜೀವನ್, ಕಾನ್ ಸ್ಟೇಬಲ್ ಗಳಾದ ಗೋಕುಲ್, ಅನೀಶ್, ವರ್ಗೀಸ್, ಶ್ರೀನೇಶ್ ಕಾರ್ಯಚರಣೆಯಲ್ಲಿ ಭಾಗಿಗಳಾಗಿದ್ದರು.ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.

0 Comments