Ticker

6/recent/ticker-posts

Ad Code

ಕಬ್ಬಿಣದ ರಾಡ್ ನಿಂದ ಅಂಗಡಿ ಮಾಲಕನ‌ ಮೇಲೆ ಹಲ್ಲೆ : ಮೂವರ ವಿರುದ್ಧ ಕೇಸು

ಬದಿಯಡ್ಕ :  ಪೆರ್ಲ ಪೇಟೆಯ ಅಂಗಡಿಯೊಂದರೊಳಗೆ ಕಬ್ಬಿಣದ ರಾಡ್ ಹಿಡಿದು ನುಗ್ಗಿದ ದುಷ್ಕರ್ಮಿಗಳು  ಅಂಗಡಿ ಮಾಲಕನಿಗೆ ಹಲ್ಲೆಗೊಳಿಸಿದ್ದು ತಡೆಯಲು ಬಂದ  ಆತನ‌ ಸ್ನೇಹಿತನನ್ನು ಹೊಡೆದು  ಗಾಯಗೊಳಿಸಿದ ಬಗ್ಗೆ ಮೂವರ ವಿರುದ್ಧ ಬದಿಯಡ್ಕ ಪೋಲಿಸರು ಕೇಸು ದಾಖಲಿಸಿದ್ದಾರೆ.  ಪುತ್ತೂರು ತಾಲೂಕಿನ  ಬೆಟ್ಟಂಪಾಡಿ  ನಿವಾಸಿ ಕೆ.ಎಂ. ಮುಹಮ್ಮದ್ ಅಶ್ರಫ್ (45) ಅವರ ಮೇಲೆ ಹಲ್ಲೆ ನಡೆದಿದ್ದು,   ಅವರ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಪೆರ್ಲ ನಿವಾಸಿಗಳಾದ  ಗಣೇಶ್, ಅವಿನಾಶ್ ಮತ್ತು ಪ್ರತ್ಯಕ್ಷದರ್ಶಿಯಾಗಿರುವ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಮುಹಮ್ಮದ್ ಅಶ್ರಫ್ ಪೆರ್ಲದಲ್ಲಿ ಅಂಗಡಿಯಲ್ಲಿ ಇರುವ ವೇಳೆ ಮೂವರನ್ನೊಳಗೊಂಡ  ತಂಡ ಅಂಗಡಿಗೆ ನುಗ್ಗಿ ಮುಹಮ್ಮದ್ ಅಶ್ರಫ್ ಅವರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಬೆದರಿಕೆ ಹಾಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಹಮ್ಮದ್ ಅಶ್ರಫ್ ಮತ್ತು ಆತನ‌ ಸ್ನೇಹಿತ ಚೆಂಗಳ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Post a Comment

0 Comments