Ticker

6/recent/ticker-posts

Ad Code

ಮಣಿಯಂಪಾರೆಯ ವತ್ಸಲಾ ಕೆ.ಪಿ. ನಿಧನ

ಪೆರ್ಲ :  ಮಣಿಯಂಪಾರೆ ನಿವಾಸಿ  ವತ್ಸಲ ಕೆ.ಪಿ.(72) ಉಸಿರಾಟ ಸಮಸ್ಯೆಯಿಂದ ಇಂದು ಮುಂಜಾನೆ ನಿಧನರಾದರು. ಇವರ ಪತಿ ಬಡಗಿ ವೃತ್ತಿ ನಿರ್ವಹಿಸುತ್ತಿದ್ದ ಬಾಲಕೃಷ್ಣ ಆಚಾರಿ ಈ ಹಿಂದೆಯೇ ನಿಧನರಾಗಿದ್ದು, ಮೃತರು  ಪುತ್ರರಾದ ಅಜಿತ್ (ಗಲ್ಫ್ ಉದ್ಯೋಗಿ), ಅನಿಲ್ ಕುಮಾರ್ ಕೆ.ಪಿ.(ಮಾಜಿ ಬ್ಲೋಕ್ ಪಂ.ಸದಸ್ಯ, ಬಿಜೆಪಿ ಕುಂಬಳೆ ಮಂಡಲ ಪ್ರ.ಕಾರ್ಯದರ್ಶಿ), ಅರುಣ್ (ಕ್ಲಿಕ್ ಸ್ಟಿಕ್ಕರ್ ಕಟ್ಟಿಂಗ್ ಮಾಲಕ), ಅನೂಪ್ (ಗಲ್ಫ್ ಉದ್ಯೋಗಿ), ಪುತ್ರಿಯರಾದ ಅಜಿತಾ, ಅಂಬಿಕಾ, ಅರ್ಚನ, ಸೊಸೆಯಂದಿರಾದ ಆಶಾಲತಾ, ಸುನೀತಾ, ಶ್ರಾವ್ಯ, ಶಾರದ, ಅಳಿಯಂದಿರಾದ ಸುರೇಶ್, ಅಶ್ವಥ್, ಸುನಿಲ್ ಹಾಗೂ ಸಹೋದರರಾದ ಕೆ.ಪಿ ಆಶೋಕ ಕುಮಾರ್, ಕೃಷ್ಣ, ಮೋಹನ್ ದಾಸ್, ಪ್ರದೀಪ್, ವತ್ಸರಾಜ್ ( ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ) ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ಪುತ್ರರು ಗಲ್ಫ್ ನಲ್ಲಿ ಇರುವ ಕಾರಣ ಮೃತದೇಹವನ್ನು ಕುಂಬಳೆ ಜಿಲ್ಲಾಸ್ಪತ್ರೆಯ ಶೀತಲೀಕರಣ ವಿಭಾಗದಲ್ಲಿ ಇರಿಸಲಾಗಿದೆ. ಮಧ್ಯಾಹ್ನ ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments