ಬದಿಯಡ್ಕ : ಬದಿಯಡ್ಕ ಪಂಚಾಯತಿನ ಕುಡುಪ್ಪಂಗುಯಿ ಅಂಗನವಾಡಿ ಪ್ರವೇಶೋತ್ಸವ ಇಂದು ನಡೆಯಿತು. ಸಂದರ್ಭದಲ್ಲಿ ಅಂಗನವಾಡಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆಡೆಗೆ ಹೋಗುವ ನಾಲ್ವರು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯನ್ನು ನೀಡಲಾಯಿತು.

ವಿದ್ಯಾರ್ಥಿಗಳ ಕೈಯಲ್ಲಿ ತೆಂಗಿನ ಸಸಿಯನ್ನು ನೆಡಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಮಧುಸೂದನ್, ಅಂಗನವಾಡಿ ಅಧ್ಯಾಪಿಕೆ ಸುಶೀಲಾ ಕೆ, ಸಹಾಯಕಿ ಪುಷ್ಪಾ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.