Ticker

6/recent/ticker-posts

Ad Code

ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್‌ ಬುಧವಾರ ಪ್ರಮಾಣವಚನ ಸ್ವೀಕಾರ

 

ಬೆಂಗಳೂರು : ಡಿ.ಕೆ ಶಿವಕುಮಾರ್‌ ಅವರ ಪದಗ್ರಹಣಕ್ಕೆ ದಿನ ನಿಗದಿಯಾಗಿದೆ.  ಬುಧವಾರ (ಜೂ.3) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ 4 ಗಂಟೆಯ ನಂತರ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌ ಮುಂದೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಗೂ ಮುನ್ನ  ಡಿ.ಕೆ ಶಿವಕುಮಾರ್‌  ರಾಜ್ಯಪಾಲರನ್ನು  ಭೇಟಿಯಾಗಲಿದ್ದಾರೆ.

ಸಿಎಲ್‌ಪಿ ಸಭೆಯ ಬಳಿಕ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಾಸಕಾಂಗ ಪಕ್ಷದ ನಾಯಕ ರಾಜ್ಯಪಾಲರನ್ನು  ಭೇಟಿ ಮಾಡೋದು ನಿಯಮ. ಆದರೆ   ರಾಜ್ಯಪಾಲರು ಇಂದು ಸಂಜೆ ಧರ್ಮಸ್ಥಳ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದಕ್ಕೂ ಮುನ್ನವೇ ಡಿಕೆ ಶಿವಕುಮಾರ್‌ ರಾಜ್ಯಪಾಲರನ್ನು  ಭೇಟಿಯಾಗಲು ನಿರ್ಧರಿಸಿದ್ದಾರೆ. ಡಿಕೆಶಿ ಆಗಮನದ ಹಿನ್ನೆಲೆ ಲೋಕಭವನದ ಮುಂದೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕೆಎಸ್‌ಆರ್‌ಪಿ ತುಕಡಿಯನ್ನು  ಭದ್ರತೆಗೆ ನಿಯೋಜನೆ ಮಾಡಲಾಗಿದೆ.

Post a Comment

0 Comments