Ticker

6/recent/ticker-posts

Ad Code

ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಯುವಕ ದಾರುಣ ಮೃತ್ಯು : ತಂದೆಗೆ ಗಂಭೀರ ಗಾಯ


 ಕುಂಬಳೆ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಪೆರಿಯಡ್ಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಬಾಯಾರ್‌ ಚಿಪ್ಪಾರ್‌ನ ನೇತ್ರಗುಳಿ ಮನೆಯ ಎನ್. ಕಿಶನ್ (25) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕಿಶನ್ ತಂದೆ ಮಾಧವ ದೇವಾಡಿಗೆ (55) ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಗುರುವಾರ) ಬೆಳಿಗ್ಗೆ ಕಿಶನ್ ಸಂಚರಿಸುತ್ತಿದ್ದ ಸ್ಕೂಟರ್ ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

Post a Comment

0 Comments