ಪೆರ್ಲ : ತೀವ್ರ ಜ್ವರ ಬಾಧಿಸಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕನೋರ್ವ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರು ಖಂಡಿಗೆ ಸಮೀಪದ ಅಬ್ಬಿಕಟ್ಟೆಯ ದಾಮೋದರ ನಾಯ್ಕ್ (42) ಎಂದು ಗುರುತಿಸಲಾಗಿದೆ. ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದ ದಾಮೋದರರಿಗೆ ಪದೇ ಪದೇ ಜ್ವರ ಬರುತ್ತಿದ್ದು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ತೆರಳಿದಾಗ ಜ್ವರ ಉಲ್ಬಣಗೊಂಡಿದ್ದು ಇಲಿ ಜ್ವರ ಬಾಧಿಸಿರಬೇಕೆಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಇವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು
ಸಿಪಿಐಎಂ ಪಕ್ಷದ ಖಂಡಿಗೆ ಬ್ರಾಂಚ್ ಸದಸ್ಯರಾಗಿದ್ದಾರೆ. ಮೃತರ ತಂದೆ ಈ ಹಿಂದೆಯೇ ನಿಧನರಾಗಿದ್ದು ಪತ್ನಿ ಜಯಲಕ್ಷ್ಮಿ ಮಗಳು ಚೈತ್ರ ತಾಯಿ ರತ್ನಾ ಹಾಗೂ ಸಹೋದರರನ್ನು ಸಹೋದರಿಯನ್ನು ಆಗಲಿದ್ದಾರೆ. ಇವರ ನಿಧನಕ್ಕೆ ಸಿಪಿಐಎಂ ಖಂಡಿಗೆ ಬ್ರಾಂಚ್ ಹಾಗೂ ಎಣ್ಮಕಜೆ ಲೋಕಲ್ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

0 Comments