Ticker

6/recent/ticker-posts

Ad Code

ಜೂ. 1ರಂದು ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವ ಉದ್ಘಾಟನೆ

 

ತಿರುವನಂತಪುರ : ನೂತನ ಅಧ್ಯಯನ ವರ್ಷದ ಶಾಲಾ ಪ್ರವೇಶೋತ್ಸವದ ರಾಜ್ಯಮಟ್ಟದ ಉದ್ಘಾಟನೆಯು ತಿರುವನಂತಪುರಂ ಪಟ್ಟಂ ಬಾಲಕಿಯರ  ಸರಕಾರಿ ಪ್ರೌಢಶಾಲೆಯಲ್ಲಿ  ಜೂ. 1 ಸೋಮವಾರ ನಡೆಯಲಿದೆ.  ಮುಖ್ಯಮಂತ್ರಿ ವಿ.ಡಿ. ಸತೀಶನ್ ಉದ್ಘಾಟಿಸುವರು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರವೇಶೋತ್ಸವವನ್ನು ಉತ್ತಮವಾಗಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. ಈ ವರ್ಷದ ಪ್ರವೇಶೋತ್ಸವದ ಹಾಡು ರಫೀಕ್ ಅಹಮದ್ ರಚಿಸಿ ಹಿಶಾಮ್ ಅಬ್ದುಲ್ ವಹಾಬ್ ಹಾಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಎರಡು ಜಿಲ್ಲಾ ಮಟ್ಟದ ಪ್ರವೇಶೋತ್ಸವಗಳು ಗಮನಕ್ಕೆ  ಬಂದಿದೆ   ಪ್ರವೇಶ ಮಹೋತ್ಸವದಲ್ಲಿ ಯಾವುದೇ ತಕರಾರು ಇಲ್ಲ. ಎರಡೂ ನಡೆಯಲಿ. ಸಂವಹನದಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ಸಚಿವರು ಹೇಳಿದರು. 

ಅಗತ್ಯವಿರುವ ಕಡೆ ಪ್ಲಸ್ ಒನ್ ಸೀಟು ಹೆಚ್ಚಿಸಲಾಗುವುದು. ಪಠ್ಯಕ್ರಮದ ಸುಧಾರಣೆ ಕೂಡ ಪರಿಗಣನೆಯಲ್ಲಿದೆ. ಸದ್ಯ 10ನೇ ತರಗತಿ ಓದುತ್ತಿರುವ ಮಗುವಿಗೆ ಅಕ್ಷರ ಗೊತ್ತಿಲ್ಲದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳ ಮುಟ್ಟಿನ ರಜೆಯ ವಿವರಗಳನ್ನು ನಂತರ ತಿಳಿಸಲಾಗುವುದು ಎಂದು ಸಚಿವರು ಹೇಳಿದರು.

Post a Comment

0 Comments