ಬದಿಯಡ್ಕ : ಬದಿಯಡ್ಕ ಪಂಚಾಯತ್ ಮಟ್ಟದ ಅಂಗನವಾಡಿ ಪ್ರವೇಶೋತ್ಸವ ಕಾರ್ಯಕ್ರಮ ಸೀತಾಂಗೋಳಿ ಅಂಗನವಾಡಿಯಲ್ಲಿ ನೆರವೇರಿತು. ಗ್ರಾ. ಪಂ. ಅಧ್ಯಕ್ಷ ಶಂಕರ ಡಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ. ಪಂ. ಸದಸ್ಯ ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ. ರಾಮಪ್ಪ ಮಂಜೇಶ್ವರ, ನಿವೃತ್ತ ಕಂದಾಯ ಇಲಾಖಾ ಅಧಿಕಾರಿ ಕೃಷ್ಣ ದಾಸ್, ಐಸಿಡಿಎಸ್ ಸೂಪರ್ವೈಸರ್ ರಂಜಿನಿ, ಡಿ. ಗೋಪಾಲ, ಅಂಗನವಾಡಿ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಅಂಗನವಾಡಿ ಶಿಕ್ಷಕಿ, ಸಹಾಯಕಿ ಹಾಗೂ ಹೆತ್ತವರು ಭಾಗವಹಿಸಿದರು.

0 Comments