ಬದಿಯಡ್ಕ : ಪತ್ನಿ ಮತ್ತು ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವನನ್ನು ಬದಿಯಡ್ಕ ಪೋಲಿಸರು ಬಂಧಿಸಿದ್ದಾರೆ. ಬೇಳ ಸಮೀಪದ ಕುಮಾರಮಂಗಲದ ವಿಷ್ಣುರಾಜ್ (39) ಬಂಧಿತ ವ್ಯಕ್ತಿ. ಬದಿಯಡ್ಕ ಎಸ್‌ಐ ರೂಪೇಶ್ ಅವರಿಗೆ ಕುಮಾರಮಂಗಲದ ಮನೆಯೊಂದರಲ್ಲಿ ಹೆಂಡತಿ ಮತ್ತು ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಲಭಿಸಿದ ರಹಸ್ಯ ಮಾಹಿತಿಯ ಮೇರೆಗೆ, ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ವಿಷ್ಣುರಾಜ್ ಅವರನ್ನು ಸಮಾಧಾನಿಸಲು ಪ್ರಯತ್ನಿಸಿತು, ಆದರೆ ಆತ ಸಹಕರಿಸದಿದ್ದಾಗ, ಠಾಣೆಗೆ ಕರೆದೊಯ್ದು ಬಂಧಿಸಲಾಯಿತು. ಬದಿಯಡ್ಕ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

0 Comments