ಬದಿಯಡ್ಕ : ದಾರಿ ಮಧ್ಯೆ ಬಿದ್ದು ಸಿಕ್ಕಿದ ಒಂದೂವರೆ ಪವನ್ ಚಿನ್ನದ ಸರವನ್ನು ಬದಿಯಡ್ಕ ಪೊಲೀಸ್ ಠಾಣೆಯ ಮೂಲಕ ನಿಜವಾದ ವಾರೀಸುದಾರರಿಗೊಪ್ಪಿಸಿದ ಕೂಲಿ ಕಾರ್ಮಿಕರೋರ್ವ ಮಾದರಿಯಾಗಿದ್ದಾರೆ. ಮಹಾಲಿಂಗ ನಿಡುಗಳ ಅವರಿಗೆ ಸುಮಾರು ಒಂದೂವರೆ ಪವನಿನ ಚಿನ್ನದ ಸರ ಕಿಳಿಂಗಾರ್ ನೀರ್ಚಾಲ್ ರಸ್ತೆಯಲ್ಲಿ ಬಿದ್ದು ಸಿಕ್ಕಿತ್ತು. ಚಿನ್ನಾಭರಣದ ವಾರೀಸುದಾರರಾದ ಮಹೇಶ್ ಪೆರಿಯಡ್ಕ ಅವರು ಅದನ್ನು ಒತ್ತೆ ಇಡಲು ಕೊಂಡೊಯ್ಯುತ್ತಿರುವ ನಡುವೆ ಜೇಬಿನಿಂದ ಹೊರಬಿದ್ದು ಕಳೆದು ಹೋಗಿತ್ತು. ಈ ಬಗ್ಗೆ ಪೋಲಿಸರಿಗೆ ವಿಷಯ ತಿಳಿಸಿದ್ದು ಬಳಿಕ ಕೂಲಿ ಕಾರ್ಮಿಕರಾದ ಮಹಾಲಿಂಗ ಎಂಬವರಿಗೆ ಚಿನ್ನ ದೊರಕಿದ್ದು ಅವರು ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ಚಿನ್ನದ ವಾರೀಸುದಾರರಾದ ಮಹೇಶರಿಗೆ ಹಸ್ತಾಂತರಿಸಿದರು.

0 Comments