ಬದಿಯಡ್ಕ : ಕೇಂದ್ರ ಸರಕಾರವು ಪೆಟ್ರೋಲ್-ಡೀಸೆಲ್ ವಾಣಿಜ್ಯ ಮತ್ತು ಅಡುಗೆ ಅನಿಲದ ಬೆಲೆಯನ್ನು ಪದೇ ಪದೇ ಏರಿಸುತ್ತಿರುವುದನ್ನು ವಿರೋಧಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ನೇತಾರರಾದ ಜಿ.ಚಂದ್ರಹಾಸ ರೈ, ಜಗನ್ನಾಥ ರೈ, ಖಾದರ್ ಮಾನ್ಯ ಕುಮಾರನ್ ನಾಯರ್, ಚಂದ್ರಹಾಸನ್ ನಂಬಿಯಾರ್, ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್ ಪಟ್ಟಾಜೆ, ಶಾಫಿ ಗೋಳಿಯಡ್ಕ, ಖಮರುದ್ದೀನ್, ನಿಜೇಶ್. ಕೆ, ರಜಿನಿ, ನಾರಾಯಣ ಭಂಡಾರಿ ಮೊದಲಾದವರು ಪ್ರತಿಭಟನಾ ಮೆರವಣಿಗೆಗೆ ನೇತೃತ್ವ ವಹಿಸಿದ್ದರು.

0 Comments