ಮಂಗಳೂರು : ಖ್ಯಾತ ಲೇಖಕಿ, ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ರಚಿಸಿದ 'ನಾನು ಕಾರಂತ' ವಿನೂತನ ನಾಟಕ ಮೇ 29 ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಪ್ರದರ್ಶನಕ್ಕೆ ಸಜ್ಜಾಗಿದೆ. ಮಂಗಳೂರು ವಿ.ವಿ.ಯ ಮಂಗಳಗಂಗೋತ್ರಿ ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠ ನೆಹರು ಚಿಂತನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ನಾಟಕ ಪ್ರದರ್ಶನ ಕಾಣಲಿದೆ.
ಕಾರಂತರ ಸಾಹಿತ್ಯ ಕೃತಿ ಆಧಾರಿತ ಬದುಕಿನ ವಿವಿಧ ಮಜಲುಗಳನ್ನು ವೈವಿಧ್ಯಮಯವಾಗಿ ರಚಿಸಿದ 'ನಾನು ಕಾರಂತ' ನಾಟಕವನ್ನು ಜಗನ್ ಪವಾರ್ ನಿರ್ದೇಶಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳೇ ಸ್ವತಃ ನಾಟಕದಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸುತ್ತಿರುವುದು ನಾಟಕದ ಇನ್ನೊಂದು ವಿಶೇಷತೆಯಾಗಿದೆ.
ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್,ಪ್ರಭಾರ ಕುಲಸಚಿವರಾದ ಪ್ರೊ. ಗಣೇಶ್ ಸಂಜೀವ್, ನೆಹರು ಚಿಂತನ ಕೇಂದ್ರ ನಿರ್ದೇಶಕ ಪ್ರೊ. ಪ್ರಶಾಂತ ನಾಯ್ಕ, ಕಾರ್ಯಕ್ರಮದ ವ್ಯವಸ್ಥಾಪಕರಾದ ಪ್ರೊ. ನಾಗಪ್ಪ ಗೌಡ, ನಿರ್ದೇಶಕ ಯತೀಶ್ ಕುಡುಪು ಕೃತಿಕಾರ್ತಿ ರಾಜಶ್ರೀ ಟಿ.ರೈ ಪೆರ್ಲ ಮೊದಲಾದವರು ಉಪಸ್ಥಿತರಿರುವರು.

0 Comments