ನೀರ್ಚಾಲು : 2025-26 ನೆ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರದ ಶಿಕ್ಷಣ ಇಲಾಖೆ ನಡೆಸಿದ ಸಿ.ಎಂ.ಕಿಡ್ಸ್ ಸ್ಕಾಲರ್ಶಿಪ್ ಪರೀಕ್ಷೆಯ (ಎಲ್.ಎಸ್.ಎಸ್.)ಫಲಿತಾಂಶವು ಪ್ರಕಟವಾಗಿದ್ದು, ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಐದು ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ಈ ಶಾಲೆಯ ಅದ್ವೈತ್.ಎಂ, ಕನಿಹಾ.ವಿ, ವಿಷ್ಣು.ಕೆ.ಎ, ಶಿವಪ್ರಸಾದ. ಬಿ.ಭಟ್ ಮತ್ತು ಅಜಯ್ ಕೃಷ್ಣ. ಡಿ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.

0 Comments