ಬದಿಯಡ್ಕ : ಸರ್ಕಾರ ನಿಷೇಧಿಸಿದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೆರ್ಲ ಸಮೀಪದ ಮರ್ತ್ಯ ನಿವಾಸಿ ಯೂಸುಫ್ (72) ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದಲ್ಲಿ ನಡೆದ ಗಸ್ತು ತಿರುಗುವಿಕೆಯ ಸಮಯದಲ್ಲಿ, ಉಕ್ಕಿನಡ್ಕ ಬಸ್ ವೇಟಿಂಗ್ ಶೆಲ್ಟರ್ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಯೂಸುಫ್ ಸಿಕ್ಕಿಬಿದ್ದಿದ್ದು, ಈತನ ಬಳಿಯಿದ್ದ 99 ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

0 Comments