ಮುಳ್ಳೇರಿಯ : ಎರಡೂವರೆ ವರ್ಷದ ಬಾಲಕ ಕೆರೆಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮುಳ್ಳೇರಿಯ ಕಾರ್ಲೆಯ ರೋಹಿತ್‌ಶೆಟ್ಟಿ ಮತ್ತು ದಿವ್ಯಾ ದಂಪತಿಯ ಪುತ್ರ ದೇವಾಂಗ ಮೃತ ಕಂದಮ್ಮ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿದ್ದು, ಹುಡುಕಾಡಿದಾಗ ಮನೆ ಸಮೀಪದ ಕಂಗಿನ ತೋಟದ ಕೆರೆಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಅಸ್ಪತ್ರೆಗೆ ದಾಖಲಿಸಿದರೂ ಮಗುವಿನ ಜೀವ ಉಳಿಸಲಾಗಲಿಲ್ಲ. ಈತನ ಸಹೋದರ ದೇವಾನುಷ್.

0 Comments