ಕಾಪು :  ಭಾರತೀಯ ಸಂಸ್ಕೃತಿಯೇ ದೇವಾಲಯದ ಸಂಸ್ಕೃತಿ ಶಿಲ್ಪಗಳಾಗಿವೆ.  ಆಧುನಿಕ ವಿಜ್ಞಾನಗಳಿಗೆ ಸವಾಲಾಗಿರುವ ವಿಶ್ವಕರ್ಮ ಶಿಲ್ಪಿ ಸಮುದಾಯದ ಅದ್ಭುತ ಶಿಲ್ಪಗಳ ದೇವಾಲಯಗಳ ಶಿಲ್ಪವೇ ಭಾರತೀಯ ಸಂಸ್ಕೃತಿಯಾಗಿದೆ. ಹೀಗೆ ಪ್ರವಾಸೋದ್ಯಮಕ್ಕೆ ಆಧಾರವಾಗಿರುವ ಭಾರತೀಯ ಶಿಲ್ಪ ವೈಭವಗಳ ದೇವಾಲಯಗಳು ಭಾರತ ಸರಕಾರದ ಆದಾಯದ ಮೂಲವೂ ಆಗಿದೆ  ಎಂದು ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಶ್ವವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಹೇಳಿದರು.

ಶ್ರೀಗಳವರು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ  ತಮ್ಮ  ೧೬ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವದ ಸಂದರ್ಭ ಜರಗಿದ ಧಾರ್ಮಿಕ ಸಭೆಯಲ್ಲಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಆನೆಗುಂದಿಶ್ರೀ ಪ್ರಶಸ್ತಿ ವಿತರಣೆ ಹಾಗೂ ಯುವ ಶಿಲ್ಪಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ತಮ್ಮ ಆಶೀರ್ವಚನದಲ್ಲಿ ಸಂದೇಶ ನೀಡಿದರು. ನವ್ಯ ಶಿಲ್ಪ ಮತ್ತು ಪಾರಂಪರಿಕ ಶಿಲ್ಪ ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಶಾಸ್ತ್ರ ಸಹಿತವಾದ ಶಿಲ್ಪ ಅಧ್ಯಯನ ಕೇಂದ್ರ ಮತ್ತು ಶಿಲ್ಪ ಮ್ಯೂಸಿಯಂ ಕೇಂದ್ರ ವನ್ನು ಸ್ಥಾಪಿಸಬೇಕೆಂಬ ಮಹದಾಸೆಯಿದೆ. ಅದಕ್ಕೆ ಸರ್ಕಾರ ಮತ್ತು ಸಮಾಜ ಭಾಂಧವರೆಲ್ಲರ ಸಹಕಾರದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು. ಸಂಕಲ್ಪ ವಿಕಲ್ಪಗಳು ಮನಸ್ಸಿನ ಸ್ವಭಾವ. ದೇಹವೇ ದೇಶವಾಗಿದೆ. ದೇಹದೊಳಗಿನ ಆತ್ಮವೇ ರಾಜ. ಅರಿಷಡ್ವರ್ಗಗಳನ್ನು ಗೆದ್ದು, ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳುವವರಿಗೆ ಪಟ್ಟಾಭಿಷೇಕ ಆಗುತ್ತದೆ. ಅದರ ದ್ಯೋತಕವಾಗಿ ಅಂತರಂಗದ ಪಟ್ಟಾಭಿಷೇಕಕ್ಕೆ  ಹಾಗೂ ಬಾಹ್ಯ ವರ್ಧಂತ್ಯೋತ್ಸವವನ್ನು ಶ್ರದ್ಧಾ ಭಕ್ತಿಯ ಪ್ರತೀಕವಾಗಿ ನೆರವೇರಿಸಿದ್ದು, ಬಹಳಷ್ಟು ಖುಷಿಯ ವಿಚಾರವಾಗಿದೆ, ಸಂಸ್ಕಾರದ ತಳಹದಿಯಲ್ಲಿ ಸಮಾಜವನ್ನು ಕಟ್ಟಬೇಕು. ಆ ನಿಟ್ಟಿನಲ್ಲಿ ದೇವಸ್ಥಾನ - ಮಠ - ಸಮಾಜವು ಒಂದಾಗಿ ಸಾಗುವುದು ಆರೋಗ್ಯಕರ, ಶ್ರೀಮಠದ ಸಮಸ್ತ ಯೋಜನೆಗಳಿಗೆ ಸಮಾಜವು ಕೈ ಜೋಡಿಸುವಂತೆ ವಿನಂತಿಸಿದರು.

ಆಸ್ಥಾನ ವಿದ್ವಾಂಸ ಪಂಜ ಭಾಸ್ಕರ ಭಟ್ ಮಾತನಾಡಿ, ಆಧುನಿಕತೆಯ ಸೋಗಿನಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಶಿಲ್ಪಕಲಾ ವೈಭವನ್ನು ಮತ್ತಷ್ಟು ಮುನ್ನಲೆಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದವರಿಯಬೇಕಿವೆ. ವಿಶೇಷವಾಗಿ ಕಾಷ್ಠ ಶಿಲ್ಪಕಲೆಯ ಬಗ್ಗೆ ಹೆಚ್ಚಿನ ಉತ್ಸಾಹ ಮತ್ತು ಕಾಳಜಿ ತೋರಿಸಬೇಕಿದೆ ಎಂದರು. ಬ್ರಹ್ಮಶ್ರೀ ವಿದ್ವಾನ್ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ  ಅವರು ಮಹಾಸಂಸ್ಥಾನದ ಪರಂಪರೆಯ ಬಗ್ಗೆ ವಿವರಣೆನೀಡಿ ಧರ್ಮ ಸಂದೇಶ ನೀಡಿದರು.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ : 

ಎಸ್.ಕೆ.ಎಫ್. ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ  ಡಾ. ಜಿ. ರಾಮಕೃಷ್ಣ ಆಚಾರ್ ಅವರ ಅಧ್ಯಕ್ಷತೆಯ ರಾಷ್ಟ್ರೀಯ ಪ್ರಶಸ್ತಿ ಸಮಿತಿ ಮತ್ತು ಡಾ. ಬಿ. ಶ್ರೀಕಂಠಾಚಾರ್ ಅವರ ಸಂಚಾಲಕತ್ವದಲ್ಲಿ ಆಯ್ಕೆ ಮಾಡಲಾಗಿರುವ  ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿಯನ್ನು ಲೋಹ ಶಿಲ್ಪಿ ಹೊನ್ನಪ್ಪಾಚಾರ್ ಬೆಂಗಳೂರು ಅವರಿಗೆ ಪ್ರಧಾನಿಸಲಾಯಿತು. ಮಹಾಶಿಲ್ಪಿ  ಗುಂಡನ್ ಅನಿವಾರಿತಾಚಾರಿ ತ್ರಿಭುವನಾಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಲ್ಬುರ್ಗಿ ಕೊತ್ತನೂರು ಹಿರಿಯ ಶಿಲ್ಪಿ ಸ್ಥಪತಿಗಳಾದ ಡಾ. ಮಾನಯ್ಯ ಎನ್. ಬಡಿಗೇರ ಅವರಿಗೆ ಪ್ರಧಾನಿಸಲಾಯಿತು. ವಾಸ್ತು ಪಿತಾಮಹ ಸರ್ವಸಿದ್ಧಿ ಆಚಾರಿ ರಾಷ್ಟ್ರೀಯ ಪ್ರಶಸ್ತಿಯನ್ನು  ಅಂತರಾಷ್ಟ್ರೀಯ ಖ್ಯಾತಿಯ ಸ್ಥಪತಿಗಳಾದ ಡಾ. ಪ್ರಭಾಕರ ಗೋವಿಂದ ಆಚಾರ್ಯ ಕುಂಭಕೋಣಂ ಅವರಿಗೆ ಪ್ರಧಾನಿಸಲಾಯಿತು. ಚಾಳುಕ್ಯ ಶಿಲ್ಪಿ ಲಿಪಿಕಾರ ಶ್ರೀ ಅಕ್ಷರಮೇರು ದಾಮೋದರಾಚಾರಿ ಸಾಹಿತ್ಯ ಸರಸ್ವತೀ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿಯ ಈ. ಭೀಮಸೇನ ಬಡಿಗೇರ ಅವರಿಗೆ ಪ್ರಧಾನಿಸಲಾಯಿತು.

ಆನೆಗುಂದಿಶ್ರೀ ಪ್ರಶಸ್ತಿ ಪ್ರದಾನ : 

ಮಹಾಸಂಸ್ಥಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಆನೆಗುಂದಿಶ್ರೀ ಪ್ರಶಸ್ತಿ ಯನ್ನು  ವೇ.ಬ್ರ. ನಾಗಭೂಷಣ ಆಚಾರ್ಯ  ತುಮಕೂರು (ಶಿಲ್ಪ), ಜ್ಯೋತಿಷಿ ಸಿ.ವಿ. ಪೊದುವಾಳ್ ಮಂಗಳೂರು (ಜ್ಯೋತಿಷ್ಯ),  ಕೆ. ವಾದಿರಾಜ ರಾವ್ ನೇಜಾರು (ಸಾಮಾಜಿಕ ಸೇವೆ), ಡಾ. ಎಸ್.ಪಿ. ಗುರುದಾಸ್, ಮಂಗಳೂರು (ಹರಿದಾಸ ಸೇವೆ), ವೇ.ಬ್ರ. ವಿಘ್ನೇಶ್ವರ ಪುರೋಹಿತ್ ಮೂಡಬಿದ್ರೆ (ವೈದಿಕ), ಡಾ. ಕೃಷ್ಣ ಆಚಾರ್ಯ ನಕ್ರೆ ಕಾರ್ಕಳ (ಶಿಲಾ ಶಿಲ್ಪ ವಿಭಾಗ) ಅವರಿಗೆ ಪ್ರಧಾನಿಸಲಾಯಿತು. ಯುವ ಶಿಲ್ಪಿ ಪ್ರಮೋದ್ ಸಿ.ಕೆ. ಕಡೂರು, ಉದಯೋನ್ಮುಖ ಶಿಲ್ಪಿ ಮನೋಜ್ಞ ಟಿ. ಆಚಾರ್ಯ ಪುತ್ತೂರು ಹಾಗೂ ಮಹಾದಾನಿಗಳಿಗೆ ಅಭಿನಂದಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು  ವಹಿಸಿದ್ದ  ಆನೆಗುಂದಿ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ ಮಾತನಾಡಿದರು. ಗಣ್ಯರಾದ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನ ಮೂರ್ತಿ ಬೆಂಗಳೂರು, ಅಮರಾವತಿಯ ಸಮರ್ಥ್ ಬಹುದೇಶೀಯ ಸಂಸ್ಥಾ ಅಧ್ಯಕ್ಷ ಡಾ. ನಿಲೇಶ್ ವಿಶ್ವಕರ್ಮ,  ಬೆಂಗಳೂರು  ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣಸಭಾ ದ ಅಧ್ಯಕ್ಷ  ತುಕಾರಾಮ್‌ ಆಚಾರ್ಯ ಬೆಂಗಳೂರು,  ಕೊಯಂಬತ್ತೂರು ವಿಶ್ವ ಶಿಲ್ಪ ಸಂಘದ ಅಧ್ಯಕ್ಷ ಹೇಮಚಂದ್ರ ಆಚಾರ್ಯ ಕಣಂದೂರು, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ, ಮಂಗಳೂರು ಎಸ್.ಕೆ. ಗೋಲ್ಡ್ಸ್ಮಿತ್ ಸೊಸೈಟಿ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು,  ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಪ್ರತಿಷ್ಠಾನದ  ಉಪಾಧ್ಯಕ್ಷ ನಾಗರಾಜ ಆಚಾರ್ಯ ಕಾಡಬೆಟ್ಟು, ದೇವಸ್ಥಾನಗಳ ಧರ್ಮದರ್ಶಿಗಳಾದ ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಕೆ. ತಾರನಾಥ ಆಚಾರ್ಯ ಮಧೂರು, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಬಾಲಕೃಷ್ಣ ಆಚಾರ್ಯ ಮೂಡಬಿದ್ರಿ, ರಾಮಚಂದ್ರ ಆಚಾರ್ಯ ಕಾರ್ಕಳ, ಗಣೇಶ ಆಚಾರ್ಯ ಕಾಪು, ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಬಿ.ಎಂ. ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಗಜಾನನ ಆರ್. ಆಚಾರ್ಯ ಭಟ್ಕಳ, ದತ್ತಾ ಎಂ. ಆಚಾರ್ಯ ಅಂಕೋಲ, ಜಗದೀಶ್ ಆಚಾರ್ಯ ಪಡುಪಣಂಬೂರು,  ಮಹಾಸಂಸ್ಥಾನದ ವಿವಿಧ ಸಮಿತಿಗಳ ಪ್ರಮುಖರಾದ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ  ಬೆಳುವಾಯಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,  ಕೃಷ್ಣ ವಿ. ಆಚಾರ್ಯ, ಮುಂಬಯಿ, ಶ್ರೀ ಕೆ ಜೆ ಗುರುರಾಜ್‌ , ಶ್ರೀ ಲೋಲಾಕ್ಷ  ಶರ್ಮಾ ವೇದಿಕೆಯಲ್ಲಿದ್ದರು.ಪ್ರತಿಷ್ಠಾನದ  ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ವಂದಿಸಿದರು. ನ್ಯಾಯವಾದಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು, ಡಾ|ಬಾಲಕೃಷ್ಣ ಹೊಸಂಗಡಿ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಗಳು : 

ವರ್ಧಂತಿ ಉತ್ಸವದ ಅಂಗವಾಗಿ ಬೆಳಿಗ್ಗೆ ಕಟಪಾಡಿಯ ಶ್ರೀ ಮಹಾಸಂಸ್ಥಾನದಲ್ಲಿ ಜಗದ್ಗುರುಗಳವರಿಂದ  ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಪೂಜೆ ನಡೆಯಿತು. ಅನಂತರ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ ಹಾಗೂ ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನೆರವೇರಿಸಲಾಯಿತು.

ಇದೇ ಸಂದರ್ಭದಲ್ಲಿ ಜಗದ್ಗುರುಗಳವರ ೫೦ನೇ ಜನ್ಮವರ್ಧಂತಿ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಲಾಯಿತು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕೃತಿಕ ಪಂಚಪ್ರಬೋಧನ ಸಂಕಲ್ಪದ ಸುವರ್ಣ ಸಂಕಲ್ಪ ಅಭಿಯಾನ ಪ್ರಾರಂಭೋತ್ಸವ ನಡೆಯಿತು. ಪಡುಕುತ್ಯಾರು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸರಸ್ವತೀ ಹೌಸಿಂಗ್ ಸೊಸೈಟಿ ಯೋಜನೆಯ ಲೋಕಾರ್ಪಣೆ ನೆರವೇರಿತು.  ತೆಂಕನಿಡಿಯೂರು ಗುರುಸೇವಾಪರಿಷತ್‌ ವತಿಯಿಂದ ಮಹಾಸಂಸ್ಥಾನಕ್ಕೆ ಹಾಗೂ ಮಹಾಸಂಸ್ಥಾನದ ವ್ಯಾಪ್ತಿಯ ದೇವಸ್ಥಾನಗಳಿಗೆ ಕಿರು ಅಗ್ನಿಶಾಮಕ ಸಿಲಿಂಡರನ್ನು ವಿತರಿಸಲಾಯಿತು.

ಕಟಪಾಡಿಯ ಶ್ರೀ ಮಹಾಸಂಸ್ಥಾನದಲ್ಲಿ ಜಗದ್ಗುರುಗಳವರಿಂದ ಪಟ್ಟಾಭಿಷೇಕ ವರ್ಧಂತಿಗೆ ಸಂಬಂಧಿಸಿದ ವೈದಿಕ ವಿಧಿವಿಧಾನಗಳು ನೆರವೇರಿತು.  ಶ್ರೀಕರಾರ್ಚಿತ ದೇವತಾ ಪೂಜೆಯ ಬಳಿಕ, ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವೃಂದಾವನದಲ್ಲಿ ಪೂಜೆ, ನಂತರ ಪಡುಕುತ್ಯಾರಿನ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ಶ್ರೀ ವಿಶ್ವಕರ್ಮ ಯಜ್ಞ, ಶ್ರೀ ದಕ್ಷಿಣಾಮೂರ್ತಿ ಯಜ್ಞ, ಶ್ರೀ ರುದ್ರ ಯಜ್ಞ ಹಾಗೂ ಸಾಮೂಹಿಕ ಶ್ರೀ ಚಂಡಿಕಾ ಯಾಗ ಪೂರ್ಣಾಹುತಿ ನಡೆಯಿತು. ವೈದಿಕ ಕಾರ್ಯಕ್ರಮಗಳಲ್ಲಿ ವೇ ಬ್ರ ಶ್ರೀ ಶ್ರೀದರ ಪುರೋಹಿತ್‌ ಕಟಪಾಡಿ,  ವೇ ಬ್ರ ಶ್ರೀ ಲಕ್ಷೀಕಾಂತ ಶರ್ಮಾ ಬಾರ್ಕೂರು,   ವೇ ಬ್ರ ಶ್ರೀ ಅಕ್ಷಯ ಪುರೋಹಿತ್‌ ಕಟಪಾಡಿ , ಶ್ರೀ ಪ್ರಕಾಶ್‌ ಶರ್ಮಾ  ಬಾರ್ಕೂರು,  ಶ್ರೀ  ದುರ್ಗಾಪ್ರಸಾದ್‌ ಶರ್ಮಾ  ಶ್ರೀ ಶಿವಕುಮಾರ್‌ ಶರ್ಮಾ, ಶ್ರೀ ಮೌನೇಶ್‌ ಶರ್ಮಾ, ಶ್ರೀ ಮನೋಜ್‌ ಶರ್ಮಾ , ಶ್ರೀ ಪ್ರಶಾಂತ್‌ ಶರ್ಮಾ , ಶ್ರೀ ಪಂಚಮ್‌ ಶರ್ಮಾ  ಶ್ರೀ ಸರಸ್ವತೀ ಪೂರ್ವ ಚಾತ್ರಾ ಸಂಘ ಹಾಗೂ ಶ್ರೀ ನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳು ವೈದಿಕ ವಿಭಾಗದಲ್ಲಿ ಸಹಕರಿಸಿದ್ದರು.   ಜಗದ್ಗುರುಗಳವರ ೫೦ನೇ ಜನ್ಮವರ್ಧಂತಿ ವರ್ಷಾಚರಣೆಯ ಅಂಗವಾಗಿ ಒಂದು ವರ್ಷದ ಕಾಲ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಿಗೆ ಔಪಚಾರಿಕ ಚಾಲನೆ ನೀಡಲಾಯಿತು. ಕುಲಗುರು ಪೀಠ ಜಾಗೃತಿ ಹಾಗೂ ಸಾಂಸ್ಕತಿಕ  ಪಂಚಪ್ರಬೋಧನ ಸಂಕಲ್ಪದ ಸುವರ್ಣ ಸಂಕಲ್ಪ ಅಭಿಯಾನ ಪ್ರಾರಂಭೋತ್ಸವ ನಡೆಯಿತು.

ಶ್ರೀ ಸರಸ್ವತೀ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಲೋಕಾರ್ಪಣೆ :  

ಆನೆಗುಂದಿ ಪ್ರತಿಷ್ಠಾನದ ಮಾರ್ಗದರ್ಶನದೊಂದಿಗೆ ಪ್ರಾರಂಭವಾದ  “ಶ್ರೀ ಸರಸ್ವತೀ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಲಿ “ ಪಡುಕುತ್ಯಾರು ಇದರ ಉದ್ಘಾಟನೆಯನ್ನು  ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮಿಗಳವರ  ಅಮೃತ ಹಸ್ತದಿಂದ ದೀಪ ಪ್ರಜ್ವಲನದೊಂದಿಗೆ  ನೂತನ ಕಛೇರಿಯಲ್ಲಿ ನಡೆಯಿತು.  ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ  ಶ್ರೀ ಬೊಳ್ಳೂರು ಸೂರ್ಯಕುಮಾರ್ , ಆನೆಗುಂದಿ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ,  ನಿರ್ದೇಶಕರುಗಳಾದ ಶ್ರೀ ಅರವಿಂದ ವೈ. ಆಚಾರ್ಯ, ಶ್ರೀ ಪ್ರಕಾಶ್ ಆಚಾರ್ಯ ಕುಂಟಾಡಿ, ಶ್ರೀ ಎಂ. ಪಿ. ಮೋಹನ್ ಆಚಾರ್ಯ ಉಡುಪಿ, ಶ್ರೀ ಕೃಷ್ಣ ಎನ್. ಆಚಾರ್ಯ ಉದ್ಯಾವರ, ಶ್ರೀ ನಾಗರಾಜ ಆಚಾರ್ಯ ಕಿನ್ನಿಗೋಳಿ, ಶ್ರೀ ಭರತ್ ಆರ್ ಆಚಾರ್ಯ, ಶ್ರೀ ಬಿ. ಕೆ. ಹರ್ಷರಾಜ್ ಆಚಾರ್ಯ ಎಲ್ಲೂರು, ಶ್ರೀಮತಿ ಪುಷ್ಪಾ ಲಕ್ಷ್ಮಣ ಆಚಾರ್ಯ, ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಬಾಳಿಲ ಉಪಸ್ಥಿತರಿದ್ದರು.   ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ ಉಪಾಧ್ಯಕ್ಷ ಶ್ರೀ ಎಸ್. ಆರ್. ಹರೀಶ್ ಆಚಾರ್ಯ ವಂದಿಸಿದರು.