Ticker

6/recent/ticker-posts

Ad Code

ಚೆರ್ಕಳ‌ ನಿವಾಸಿಗಳು ಪ್ರಯಾಣಿಸಿದ ಕಾರಿನಿಂದ 291 ಗ್ರಾಂ ಎಂಡಿಎಂಎ ವಶಪಡಿಸಿದ ಅಬಕಾರಿ ಅಧಿಕಾರಿಗಳು


 ವಯನಾಡ್: ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕಾಸರಗೋಡು ನಿವಾಸಿಗಳ ಕಾರಿನಿಂದ 291 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದು ಕೇರಳದಲ್ಲಿ ನಡೆದ ಅತ್ಯಂತ ದೊಡ್ಡ ಎಂಡಿಎಂಎ ಬೇಟೆ ಎಂದು ಹೇಳಲಾಗುತ್ತಿದೆ. ಚೆರ್ಕಳ ನಿವಾಸಿಗಳಾದ ‌ಬಶೀರ್ ಯಾನೆ ಜಾಫರ್, ಕುಞ ಎಂಬಿವರನ್ನು ಈ ತಿಂಗಳ 19  ರಂದು  ಬಂಧಿಸಲಾಗಿತ್ತು. ಇವರ ಕಾರಿನಲ್ಲಿದ್ದ 6 ಗ್ರಾಂ ಎಂಡಿಎಂಎ ಅಂದು ವಶಪಡಿಸಿಕೊಳ್ಳಲಾಗಿತ್ತು. ಅಂದು ಬಂಧಿಸಿದ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದು ರಿಮಾಂಡ್ ವೀಧಿಸಲಾಗಿತ್ತು. ಈ ಆರೋಪಿಗಳನ್ನು ಇನ್ನಷ್ಟು ವಿಚಾರಣೆಗಾಗಿ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅದರಂತೆ ವಿಚಾರಣೆ ನಡೆಸಿದಾಗ ಅಂದು ವಶಪಡಿಸಿದ ಕಾರಿನ ಹಿಂಭಾಗದಲ್ಲಿ ಡಿಕ್ಕಿಯೊಳಗೆ  291 ಗ್ರಾಂ ಎಂಡಿಎಂಎ ಇದೆಯೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು  ಎಂಡಿಎಂಎ ವಶಪಡಿಸಿಕೊಂಡಿದ್ದಾರೆ

Post a Comment

0 Comments