Ticker

6/recent/ticker-posts

Ad Code

ಹೊತ್ತಿ ಉರಿದ ಕೇರಳ ನೋಂದಣಿಯ ಪ್ರವಾಸಿ ಬಸ್ – ತಪ್ಪಿದ ಭಾರೀ ದುರಂತ


ಮಡಿಕೇರಿ: ಪ್ರವಾಸಕ್ಕೆಂದು ತೆರಳಿದ  ಬಸ್ಸೊಂದು ಪ್ರಯಾಣಿಕರನ್ನು ಇಳಿಸಿ ಬರುವ ಸಂದರ್ಭ ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ವಿರಾಜಪೇಟೆಯ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡೆದಿದೆ. ಕೇರಳ  ನೋಂದಣಿಯ ಖಾಸಗಿ ಬಸ್ ಇದಾಗಿದ್ದು, ಪ್ರವಾಸಿಗರನ್ನು ಮೈಸೂರಿನಲ್ಲಿ ಇಳಿಸಿ ವಾಪಸ್ ತೆರಳುವಾಗ ಈ ಅವಘಡ ಸಂಭವಿಸಿದೆ. ಬಸ್‍ನಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರೇ ಇದ್ದರು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎನ್ನಲಾಗುತ್ತಿದೆ. ಅಕಸ್ಮಾತ್ ಪ್ರವಾಸಿಗರಿದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದರು. ರಸ್ತೆಯಲ್ಲಿ ಕೆಲವು ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

Post a Comment

0 Comments