ಬದಿಯಡ್ಕ : ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ 21 ವಾರ್ಡ್‌ಗಳನ್ನು ಹೊಂದಿರುವ ಬದಿಯಡ್ಕ ಪಂಚಾಯತ್‌ನಲ್ಲಿ ಹತ್ತು ವಾರ್ಡ್‌ಗಳು ಯುಡಿಎಫ್, ಹತ್ತು ವಾರ್ಡ್‌ಗಳನ್ನು ಬಿಜೆಪಿ ಗಳಿಸಿಕೊಂಡಿದೆ. ಸಮಬಲದ ಈ ಸ್ಥಾನದ ನಡುವೆ ಒಂದು ವಾರ್ಡನ್ನು ಗೆದ್ದಿರುವ ಎಲ್‌ಡಿಎಫ್ ನಿರ್ಣಾಯಕ ಶಕ್ತಿಯಾಗಿದೆ.
4 ನೇ ವಾರ್ಡ್, ದೇವರಮೆಟ್ಟುವಿನಿಂದ ಅನ್ನತ್ ಬೀವಿ ಬಿ.ಎಂ.ಈ ಬಾರಿ ಗೆದ್ದ ಎಡರಂಗದ ಅಭ್ಯರ್ಥಿಯಾಗಿದ್ದಾರೆ. ಈ ನಡುವೆ ಪಂಚಾಯತ್ ಆಡಳಿತ ರಚನೆಗೆ ಸಹಕರಿಸಲು ಕೆಲವು ಪಕ್ಷದ ನೇತಾರರು ಇವರನ್ನು ಸಂಪರ್ಕಿಸಿರುವುದಾಗಿ ವದಂತಿ ಇದ್ದು ಕೆಲವು ಆಧಾರರಹಿತ ವದಂತಿಗಳನ್ನು ಪಕ್ಷವು ತಿರಸ್ಕರಿಸಿರುವುದಾಗಿ ಎಲ್‌ಡಿಎಫ್ ಬೂತ್ ಸಮಿತಿ ಕಾರ್ಯದರ್ಶಿ ಇಶಾಕ್ ಬಿಎಂ ಬಹಿರಂಗ ಪ್ರಕಟಣೆ ನೀಡಿದ್ದಾರೆ. ಅನೇಕ ಜನರು ಫೋನ್ ಮೂಲಕ ಮತ್ತು ವೈಯಕ್ತಿಕವಾಗಿ ನಿರ್ಧಾರಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದು, ಎಡ ರಂಗವು ಇತರರ ಹಣವನ್ನು ತೆಗೆದುಕೊಳ್ಳುವುದು ಅಥವಾ ನಮಗೆ ಮತ ಹಾಕಿದ ಜನರನ್ನು ಮೋಸಗೊಳಿಸುವ ಯಾವುದೇ ಪ್ರಜಾಪ್ರಭುತ್ವ ವಿರೋಧಿ ವಿಷಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಮತ್ತು ಈ ವಿಷಯದಲ್ಲಿ ಯಾರೂ ಪಕ್ಷವನ್ನೋ ಅಭ್ಯರ್ಥಿಯನ್ನೊ ಸಂಪರ್ಕಿಸುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಎಲ್‌ಡಿಎಫ್ ಯಾರನ್ನೂ ಬೆಂಬಲಿಸದಿದ್ದರೆ, ಪಂ. ಆಡಳಿತವು ಡ್ರಾ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

0 Comments