ಬದಿಯಡ್ಕ ; ತ್ರಿಸ್ತರ ಪಂಚಾಯತ್ ಚುನಾವಣೆಯ ಮತ ಎಣಿಕೆ ನಡೆದು ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಬದಿಯಡ್ಕ ಗ್ರಾಮ ಪಂಚಾಯತ್‌ನ 18ನೇ ವಾರ್ಡ್ ಇಮ್ಮಡಿ ಸಂಭ್ರಮದಲ್ಲಿದೆ. ಕಾರಣವೆಂದರೆ ಈ ವಾರ್ಡಿನ ಇಬ್ಬರು ಮಹಿಳಾ ಅಭ್ಯರ್ಥಿಗಳು ಈ ಬಾರಿ ಗ್ರಾ.ಪಂ.ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲಾತಿಯಲ್ಲಿ 18 ನೇ ವಾರ್ಡ್ ಪುದುಕ್ಕೋಳಿಯಲ್ಲಿ ಸ್ಪರ್ಧಿಸಿ ಗೆದ್ದ ಬಿಜೆಪಿಯ ರಜನಿ ಸಂದೀಪ್ ಮತ್ತು ನೆರೆಯ 20 ನೇ ವಾರ್ಡ್‌ನಿಂದ ಯುಡಿಎಫ್ (ಕಾಂಗ್ರೆಸ್) ನಿಂದ ಗೆದ್ದ ಅಶ್ವತಿ ಅಶೋಕನ್ ಇಬ್ಬರು ಕೂಡಾ ಒಂದೇ ವಾರ್ಡ್‌ನವರು ಎಂಬುದೇ ವಿಶೇಷವಾಗಿದೆ. ಬಿಜೆಪಿ ಪ್ರಾಬಲ್ಯದ ವಾರ್ಡ್‌ನಿಂದ ಸ್ಪರ್ಧಿಸಿ ಗೆದ್ದ ರಜನಿ, ಎಲ್‌ಡಿಎಫ್ ಅಭ್ಯರ್ಥಿಯನ್ನು 400 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಇದೇ ಸಂದರ್ಭ 20ನೇ ವಾರ್ಡಿನ ಬೇಳದಿಂದ ಯುಡಿಎಫ್ ಅಭ್ಯರ್ಥಿ ಅಶ್ವತಿ ಅವರು ಬಿಜೆಪಿಯ ಪ್ರೇಮಕುಮಾರಿಯನ್ನು 18 ಮತಗಳಿಂದ ಸೋಲಿಸಿದರು. ಗೆದ್ದವರಿಬ್ಬರೂ 18ನೇ ವಾರ್ಡಿಗೊಳಪಟ್ಟಿರುವುದರಿಂದ ಇಲ್ಲಿನ ಮತದಾರರ ಸಂಭ್ರಮ ಇಮ್ಮಡಿಯಾಗಿದೆ.

0 Comments