Ticker

6/recent/ticker-posts

Ad Code

ಕಾರಿನಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಮಹಿಳೆ ಸಹಿತ ಮೂವರ ಬಂಧನ

 

ಮಂಗಳೂರು : ಮಹಿಳೆಯನ್ನು ಬಳಸಿಕೊಂಡು ಐಷಾರಾಮಿ ಕಾರಿ‌ನಲ್ಲಿ  ಬೆಂಗಳೂರಿನಿಂದ  ಎಂಡಿಎಂಎ ತಂದು ಮಂಗಳೂರಿನ ಮಾದಕ ವ್ಯಸನಿಗಳಿಗೆ ಪೂರೈಕೆ ಮಾಡುತ್ತಿದ್ದ ತಂಡದ ಮೂವರನ್ನು ಬಂಧಿಸಲಾಗಿದೆ. ಅಹಮ್ಮದ್ ಶಾಬೀತ್ ಎಂಬವನು ಯಾರಿಗೂ ಅನುಮಾನ ಬಾರದಂತೆ ನೌಶಿನ ಎಂಬ ಮಹಿಳೆಯನ್ನು ಬಳಸಿಕೊಂಡು  ಮಂಗಳೂರಿನ ಮಾದಕ ವ್ಯಸನಿಗಳಿಗೆ  ಬೆಂಗಳೂರಿನಿಂದ ಮಾದಕ ವಸ್ತು ತಂದು ನಿರಂತರವಾಗಿ ಪೂರೈಕೆ ಮಾಡುತ್ತಿದ್ದು, ಸಿಸಿಬಿ ಘಟಕದ ಪೊಲೀಸರು ಡಿ.13ರಂದು ಕಾರಿನಲ್ಲಿ ಬರುತ್ತಿದ್ದ ಅಹಮ್ಮದ್ ಶಾಬೀತ್, ಮತ್ತು ಆತನ ತಂಡವನ್ನು ಅರ್ಕುಳ ಬಳಿ ಬಂಧಿಸಿದ್ದಾರೆ. ಅವರ ಬಳಿ ಇದ್ದ  ಎಂಡಿಎಂಎ 90 ಗ್ರಾಂ, ಕಾರು ಮತ್ತು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments