Ticker

6/recent/ticker-posts

ಅಮಿತ ವೇಗದಿಂದ ಬಂದ ಇನ್ನೋವ ಕಾರು ಡಿಕ್ಕಿ ಹೊಡೆದು ಮಧ್ಯ ವಯಸ್ಕ ಮೃತ್ಯು


 ಮಂಜೇಶ್ವರ: ಕಾರು ಡಿಕ್ಕಿ ಹೊಡೆದು ಪಾದಾಚಾರಿ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಮೀಯಪದವು ನಿವಾಸಿ ಹಾಗೂ ಮಂಜೇಶ್ವರ ಕೆದುಂಬಾಡಿಯಲ್ಲಿ ವಾಸಿಸುವ  ಜಯಾನಂದ (48) ಮೃತಪಟ್ಟ ವ್ಯಕ್ತಿ.  ಗುರುವಾರ ಸಂಜೆ 4  ಗಂಟೆಯ ವೇಳೆ ಅಫಘಾತ ಉಂಟಾಗಿದೆ. ಹೊಸಂಗಡಿಯಿಂದ ಬಸ್ಸಿನಲ್ಲಿ ಬಂದು ಮಂಜೇಶ್ವರದಲ್ಲಿಳಿದು  ರಸ್ತೆ ದಾಟುತ್ತಿದ್ದಂತೆಯೇ

 ಕಾಸರಗೋಡು ಭಾಗದಿಂದ ಅಮಿತ ವೇಗದಲ್ಲಿ ಬಂದ ಇನ್ನೋವ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಜಯಾನಂದರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಅವರು ಮೃತಪಟ್ಟಿದ್ದರು.  ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments