Ticker

6/recent/ticker-posts

ನೂಜಿ ಅಂಗನಿಮಾರು ಶ್ರೀಕಡಂಗಲ್ಲಾಯ ಮತ್ತು ಪರಿವಾರ ಶ್ರೀದೈವಗಳ ವರ್ಷಾವಧಿ ನೇಮೋತ್ಸವ ಆರಂಭ, ನೇಮೋತ್ಸವ ದೈವಕೋಲ ನಾಳೆ


 ಮಂಜೇಶ್ವರ ಶ್ರೀಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೇವಸ್ಥಾನ ನೂಜಿ ಅಂಗನಿಮಾರು ಶ್ರೀದೈವಗಳ ವರ್ಷಾವಧಿ ನೇಮೋತ್ಸವ ಇಂದು (ಮಾರ್ಚ್ 21) ಆರಂಭಗೊಂಡು ನಾಳೆ ಮಾರ್ಚ್ 22)  ಮುಕ್ತಾಯವಾಗಲಿದೆ. ಕಾರ್ಯಕ್ರಮದ ಅಂಗವಾಗಿ ಇಂದು  ಶ್ರೀ ದೈವಗಳ ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಬೆಳಗ್ಗೆ 8.30 ರಿಂದ ಮಹಾಗಣಪತಿ ಹೋಮ, ಕಲಶಾಭಿಷೇಕ, ನಾಗದೇವರಿಗೆ ತಂಬಿಲ, ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ನಾಳೆ  (ಮಾರ್ಚ್ 22)  ಬೆಳಗ್ಗೆ 9 ರಿಂದ ಶ್ರೀ ಕಡಂಗಲ್ಲಾಯ ಮತ್ತು ಬಂಟ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ರಿಂದ ಅಂಗನವಾಡಿ ಮಕ್ಕಳ ನೃತ್ಯ, 2024 ನೇ ಸಾಲಿನ ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ರಾಜ್ಯ ಪ್ರಶಸ್ತಿ ಪಡೆದ ವಿಶಾಲಾಕ್ಷಿ ಅಡೇಕಳಕಟ್ಟೆರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕಂತಿಕ ಕಾರ್ಯಕ್ರಮದಂಗವಾಗಿ ಸಂತೋಷ್ ಕಲಾವಿದೆ‌ರ್ ಪಾವಳ, ವರ್ಕಾಡಿ ಅಭಿನಯದ ತುಳುನಾಟಕ ಪ್ರದರ್ಶನ ನಡೆಯಲಿದೆ. ರಾತ್ರಿ 9 ರಿಂದ ಭಂಡಾರ ಏರುವುದು, ಅನ್ನಸಂತರ್ಪಣೆ ನಂತರ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಗಳ ಕೋಲ ಜರಗಲಿದೆ.

Post a Comment

0 Comments